ಬೆಂಗಳೂರು:- ದರ್ಶನ್ ಅವರ ಜಾಮೀನು ಅರ್ಜಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯ ವಜಾಗೊಳಿಸಿದೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಖಂಡನೀಯ: ಎಂ.ಎಸ್.ನಾರಾಯಣಸ್ವಾಮಿ
ಸದ್ಯ ದರ್ಶನ್ ಮುಂದೆ ಒಂದಷ್ಟು ಆಯ್ಕೆಗಳು ಇವೆ. ಅವುಗಳಲ್ಲಿ ಮೂರು ಆಯ್ಕೆಗಳು ಪ್ರಮುಖವಾಗಿದೆ. ಜಾಮೀನು ಕೋರಿ ಹೈಕೋರ್ಟ್ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಇದು ಒಂದು ಆಯ್ಕೆ. ಇನ್ನೊಂದು ಆಯ್ಕೆ ಏನೆಂದರೆ, ಅನಾರೋಗ್ಯದ ಕಾರಣವನ್ನು ನೀಡಿ 57ನೇ ಸಿಸಿಹೆಚ್ ಕೋರ್ಟ್ನಲ್ಲಿಯೇ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು.
ಹೈಕೋರ್ಟ್ಗೆ ಸಲ್ಲಿಸಲಿರುವ ಜಾಮೀನು ಅರ್ಜಿಯಲ್ಲಿಯೂ ದರ್ಶನ್ ಅವರು ಅನಾರೋಗ್ಯದ ವಿಷಯವನ್ನು ಹೆಚ್ಚುವರಿ ಕಾರಣವಾಗಿ ಉಲ್ಲೇಖಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ವೈದ್ಯಕೀಯ ದಾಖಲೆಗಳಿಗಾಗಿ ಜೈಲು ಅಧಿಕಾರಿಗಳಿಗೆ ವಕೀಲರಿಂದ ಇಮೇಲ್ ಮಾಡಲಾಗಿದೆ. ಮೂರನೇ ಆಯ್ಕೆ ಏನೆಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಬಹುದು. ಸ್ವಂತ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ದರ್ಶನ್ ಮನವಿ ಮಾಡಬಹುದು.
ಸದ್ಯಕ್ಕೆ ದರ್ಶನ್ ಅವರ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾಮೀನು ಸಿಗತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಅವರು ಕಾಲ ಕಳೆಯುತ್ತಿದ್ದರು. ಇಂದು ಕೋರ್ಟ್ ಆದೇಶ ನೋಡಿ ಅವರಿಗೆ ನಿರಾಸೆ ಆಗಿದೆ. ಅವರು ಜೈಲಿನಿಂದ ಹೊರಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಇತ್ತ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಅವರು ಕೂಡ ಕಣ್ಣೀರು ಹಾಕುತ್ತಾ ಮೌನಕ್ಕೆ ಶರಣಾಗಿದ್ದಾರೆ.