ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ನಟದರ್ಶನ್ ಹಾಗು ಪವಿತ್ರಾ ಗೌಡ 6 ತಿಂಗಳ ನಂತರ ದು ಮುಖಾಮುಖಿಯಾಗಿದ್ರು. ದರ್ಶನ್ ಕಂಡು ಪವಿತ್ರಾಗೌಡ ಭಾವುಕ, ಗೆಳತಿಯ ಬೆನ್ನು ತಟ್ಟಿ ಸಂತೈಸಿದ ದರ್ಶನ್ .ಜಾಂಇಣು ದೊರೆತ ನಂತರ ರೇಣುಕಾಸ್ವಾಮಿ ಕೊಲೆ ಆರೋಪಿಗಳು ಇಂದು ಕೋರ್ಟ್ ಗೆ ಹಾಜರ್ ಆಗಿದ್ರು. ಈ ಕುರಿತ ರಿಪೋರ್ಟ್ ತೋರಿಸ್ತೀವಿ ನೋಡಿ.
ಗುತ್ತಿಗೆದಾರ ಸಚಿನ್ ಸೂಸೈಡ್ ಕೇಸ್ : ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರು ಅರೆಸ್ಟ್!
ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ , ಪವಿತ್ರಾಗೌಡ ಸೇರಿ 17 ಜನ ರೋಪಿಗಳು ಇಂದು ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ಮುಂದೆ ಹಾಜರಾಗಿದ್ರು. ಹೈಕೋರ್ಟ್ನಲ್ಲಿ ಜಾಮೀನು ದೊರೆತ ಬಳಿಕ ಇದೇ ಮೊದಲ ಬಾರಿಗೆ ರೇಣುಕಾ ಸ್ವಾಮಿ ಕೊಲೆ ಆರೋಪಿಗಳೆಲ್ಲ ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಆಗಲು ದಿನಾಂಕ ನಿಗಧಿ ಮಾಡಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ರು. ಮೊದಲೇ ಬಂದಿದ್ದ ಪವಿತ್ರಾ ಗೌಡ, ತಮ್ಮ ವಕೀಲರೊಂದಿಗೆ ಕೋರ್ಟ್ ಆವರಣದಲ್ಲಿ ಚರ್ಚಿಸುತ್ತಾ ನಿಂತಿದ್ದರು. ಇತರೆ ಆರೋಪಿಗಳು ಸಹ ತಮ್ಮ ತಮ್ಮ ವಕೀಲರೊಡನೆ ಕೋರ್ಟ್ಗೆ ಹಾಜರಾಗಿದ್ದರು. ಸ್ವಲ್ಪ ತಡವಾಗಿ ಬಂದ ನಟ ದರ್ಶನ್, ನಟ ಧನ್ವೀರ್ ಹಾಗು ವಕೀಲರ ಜೊತೆ ಕಾರಿನಲ್ಲಿ ನ್ಯಾಯಾಲಯಕ್ಕೆ ಬಂದ್ರು. ದರ್ಶನ್, ದರ್ಶನ್ ಇಂದು ಕುಂಟುತ್ತ ನಡೆಯಲಿಲ್ಲ, ಬದಲಿಗೆ ಆರಾಮವಾಗಿಯೇ ನಡೆಯುತ್ತಾ ನ್ಯಾಯಾಲಯ ಸಂಕೀರ್ಣದ ಒಳಗೆ ಹೋದರು. ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾ-ಮುಖಿ ಆಗಿದ್ರು.
ಈ ವೇಳೆ ದರ್ಶನ್ನ ನನ್ನು ಕಂಡ ಪವಿತ್ರಾಗೌಡ ಭಾವುಕರಾಗಿದ್ರು.ಇದನ್ನು ಕಂಡ ಗೆಳೆಯ ದರ್ಶನ್ ಪವಿತ್ರಾ ಗೌಡ ಬಳಿ ಹೋಗಿ ಬೆನ್ನು ತಟ್ಟಿ ಸಂತೈಸಿದ್ರು.. ಇದನ್ನು ನೋಡಿ ಅಲ್ಲಿದ್ದ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ದರ್ಶನ್ ಹೊರ ಬರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಒಂದೆರಡಲ್ಲ ಆದರೆ ಇವರಿಬ್ಬರೂ ಇನ್ನೂ ಮಾತನಾಡುತ್ತಿದ್ದಾರೆ ಎಂದು ಎಲ್ಲರೂ ಶಾಕ್ ಆಗಿದ್ದರು.ಈ ಘಟನೆಯನ್ನು ನೋಡಿದರೆ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಮಾತನಾಡುತ್ತಿದ್ದಾರಾ? ಯಾಕೆ ಪವಿತ್ರಾ ದರ್ಶನ್ ಬಳಿ ಮಾತನಾಡಲು ಅಷ್ಟು ಪ್ರಯತ್ನ ಪಟ್ಟರು? ದರ್ಶನ್ ಇಷ್ಟು ದಿನದಿಂದ ಮಾತನಾಡಿಲ್ವಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಹುಟ್ಟುಕೊಂಡಿದೆ.
ಹೌದು! ಸುಮಾರು 6-7 ತಿಂಗಳ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಭೇಟಿ ಆಗಿರುವುದು. ಇಬ್ಬರು ಪರಪ್ಪನ ಅಗ್ರಹಾರದಲ್ಲಿ ಇದ್ದರು ಆದರೆ ದರ್ಶನ್ ಜೈಲಿನ ಬಿಂದಾಸ್ ಲೈಫ್ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಳ್ಳಾರಿಗೆ ಎತ್ತಂಗಡಿ ಮಾಡಿದ್ದರು. ಅಲ್ಲಿಂದ ದರ್ಶನ್ ಮತ್ತು ಪವಿತ್ರಾ ಗೌಡ ಇನ್ನೂ ದೂರ ದೂರ. ಜಾಮೀನು ಪಡೆದ ಹೊರ ಬಂದಾಗ ಪವಿತ್ರಾ ಗೌಡ ಅಲ್ಲೇ ಇದ್ದ ಮುನೇಶ್ವರ ಗುಡಿಗೆಯಲ್ಲಿ ಪೂಜೆ ಸಲ್ಲಿಸಿದ್ದರು. ಆಗ ಪವಿತ್ರಾ ಮೌನವಾಗಿ ನಿಂತಿದ್ದರೂ ಸಹ ಅವರ ತಾಯಿ ಅರ್ಚನೆ ಸಮಯದಲ್ಲಿ ದರ್ಶನ್ ಹೆಸರು ತೆಗೆದರು. ಅಯ್ಯೋ ಅಮ್ಮ ಮಗಳು ಇಬ್ಬರೂ ದರ್ಶನ್ನ ಬಿಡುವಂತೆ ಕಾಣಿಸುತ್ತಿಲ್ಲ ಎಂದು ಟ್ರೋಲ್ ಕೂಡ ಗಿತ್ತು.. ಹೊರಗಿರುವ ದರ್ಶನ್ ಬೆನ್ನು ನೋವಿನ ಚಿಕಿತ್ಸೆ ಪಡೆದು ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ ಮತ್ತು ಮೈಸೂರು ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೀಗಾಗಿ ಪವಿತ್ರಾ ಹೊರ ಬಂದ ಮೇಲೆ ಭೇಟಿ ಆಗಿರುವುದು ಡೌಟ್ ಎನ್ನಲಾಗುತ್ತಿದೆ..
ಸದ್ಯಕ್ಕೆ ಜಾಮೀನ ಮೇಲೆ ಹೊರಗೆ ಇರೋ ರೇಣುಕಾಸ್ವಾಮಿ ಕೊಲೆ ಆರೋಪಿಗಳು ಪ್ರತಿ ತಿಂಗಳೂ ಕೋರ್ಟ್ ಮುಂದೆ ಹಾಜರಾಗಬೇಕಿದೆ. ಮುಂದಿನ ವಿಚಾರಣೆಯನ್ನು ಕೋರ್ಟ್ ಫೆಬ್ರವರಿ 25 ಕ್ಕೆ ನಿಗದಿ ಮಾಡಿದೆ.…ಇನ್ನು ಪವಿತ್ರಗೌಡ ಬೆಂಗಳೂರಿನಿಂದ ಹೊರಗೆ ದೇವಸ್ಥಾನಗಳಿಗೆ ಹೋಗಲು ಅನುಮತಿ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಅನುಮತಿ ಕೊಡುತ್ತಾ ಕಾದು ನೋಡಬೇಕಿದೆ.