ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ನಡೆಯುತ್ತಿರುವ ವಾಕ್ ಸಮರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 5 ದಿನಗಳಿಂದ ದರ್ಶನ್ ಆಡಿದ ಮಾತು ವಿವಾದ ಹುಟ್ಟುಹಾಕುತ್ತಿದ್ದು ಇದೀಗ ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ.
ಕಾಟೇರ ಸಿನಿಮಾ ಯಶಸ್ವಿಯಾಗಿದೆ. ಬಹಳಷ್ಟು ವರ್ಷಗಳ ಬಳಿಕ ದರ್ಶನ್ಗೆ ಒಂದು ಸಕ್ಸಸ್ ಸಿಕ್ಕಿದೆ. `ಕಾಟೇರ’ ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಈ ಟೈಮ್ನಲ್ಲಿ ಈ ರೀತಿ ಮಾಡಿಕೊಳ್ಳಬಾರದಿತ್ತು. ಇಬ್ಬರ ಜಗಳ ಚಿತ್ರರಂಗದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ನನ್ನ ಪ್ರೀತಿಯ ರಾಮು, `ಸಂಗೊಳ್ಳಿ ರಾಯಣ್ಣ’ ಬಳಿಕ ದರ್ಶನ್ ಕಾಟೇರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸಿನಿಮಾ ಹಿಟ್ ಆಗಿದೆ. ಇಂತಹ ಸಮಯದಲ್ಲಿ ಅವರುಗಳೇ ಕುಳಿತು ಇದನ್ನು ಸರಿಮಾಡಿಕೊಳ್ಳಬೇಕು. ಇದು ಇಂಡಸ್ಟ್ರಿಗೆ ಶೋಭೆ ತರುವಂತಹ ವಿಚಾರವಲ್ಲ. ಈ ವಿಚಾರದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಅದು ಕೆಟ್ಟ ಬೆಳವಣಿಗೆ ಆಗುತ್ತೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾ ಒಂದು ಅದ್ಬುತ ಜಗತ್ತು. ಆದರೆ ಕೆಲವು ಕಿಡಿಗೇಡಿಗಳು ದುರುಪಯೋಗ ಮಾಡಿಕೊಳ್ತಿದ್ದಾರೆ. ಒಬ್ಬರನ್ನು ತುಳಿಯೋದ್ದಕ್ಕೆ ಬಳಕೆ ಮಾಡ್ತಿದ್ದಾರೆ. ಇದು ಕನ್ನಡ ಇಂಡಸ್ಟಿçಯ ಮೇಲೆ ಕೆಟ್ಟ ಪರಿಣಾಮ ಬಿರುತ್ತೆ. ಮತ್ತೆ ಸಿನಿಮಾಗಳು ಗಡಿ ದಾಟಿ ರೀಚ್ ಆಗಿರೋದ್ದಕ್ಕೆ ಕಾರಣ ಸೋಷಿಯಲ್ ಮೀಡಿಯಾ ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳೋಣ ಎಂದು ಇಂದ್ರಜಿತ್ ಪ್ರತಿಕ್ರಿಯಿಸಿದ್ದಾರೆ.