ನಟ ದರ್ಶನ್ ಗೆ ತೀವ್ರ ಬೆನ್ನುನೋವು ಹಿನ್ನಲೆಯಲ್ಲಿ 9 ವರ್ಷಗಳಿಂದಲೂ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು ಸರ್ಜರಿಗೆ ಒಳಗಾಗದೇ ಇದ್ದರೆ ದರ್ಶನ್ ಗೆ ಅಪಾಯ ಆಗಲಿದೆಯಾ ಎನ್ನುವ ಚರ್ಚೆ ಶುರುವಾಗಿದೆ. ದರ್ಶನ್ ಬೆನ್ನುನೋವು ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ದಾಖಲಿಸಿದ ವರದಿಯಲ್ಲಿ ಹಲವು ಮಾಹಿತಿ ಉಲ್ಲೇಖಿಸಲಾಗಿದೆ.
ದುನಿಯಾ ವಿಜಯ್, ರಚಿತಾ ರಾಮ್ ನಟನೆಯ ‘ಚೌಡಯ್ಯ’ ಚಿತ್ರತಂಡಕ್ಕೆ ಶಾಕ್ ನೀಡಿದ ಆರ್ ಟಿ ಓ
ಬಿಮ್ಸ್ ವೈದ್ಯರ ತಂಡ ಹೀಗಾಗಲೇ ಬಿಮ್ಸ್ ನಿರ್ದೇಶಕರಿಗೆ ವರದಿ ನೀಡಿದೆ. ಬಿಮ್ಸ್ ನಿರ್ದೇಶಕರಿಂದ ವರದಿ ಜೈಲು ಅಧೀಕ್ಷಕರ ಕೈ ಸೇರಿಲ್ಲ. ವೈದ್ಯರು ನೀಡಿದ ವರದಿಯಲ್ಲಿನ ಅಂಶಗಳು ದರ್ಶನ್ ಗೆ ತೀವ್ರ ಬೆನ್ನುನೋವು ಇರೋದು ಖಾತ್ರಿ ಪಡಿಸಿವೆ ಎಂದು ಹೇಳಲಾಗುತ್ತಿದೆ.
ಕಳೆದ 9 ವರ್ಷಗಳಿಂದಲೂ ಬೆನ್ನುನೋವು ಸಂಬಂಧ ನಟ ದರ್ಶನ್ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯ ವೈದ್ಯರು ಭವಿಷ್ಯದಲ್ಲಿ ಸರ್ಜರಿ ಅವಶ್ಯಕತೆ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದು ಹೇಳಲಾಗಿದೆ..
ಹಳೆಯ ವೈದ್ಯಕೀಯ ದಾಖಲಾತಿ ಪರಿಶೀಲಿಸಿದ್ದ ಬಿಮ್ಸ್ ವೈದ್ಯರ ತಂಡ ಈಗ ದರ್ಶನ್ ಬೆನ್ನು ಮುಳೆಯ ಸ್ಥಿತಿ ಗಮನಿಸಿದ ಬಿಮ್ಸ್ ವೈದ್ಯರು ಶೀಘ್ರ ಸರ್ಜರಿ ಅವಶ್ಯಕತೆ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಒಂದು ವರದಿ ಇನ್ನೂ ಜೈಲಾಧಿಕಾರಿಗಳ ಕೈಗೆ ತಲುಪಿಲ್ಲ.
ನಿರ್ಲಕ್ಷ್ಯ ಮಾಡಿದರೆ ಮತ್ತಷ್ಟು ಬೆನ್ನುನೋವು ಉಲ್ಬಣವಾಗುವ ಬಗ್ಗೆ ತಿಳಿಸಿರುವ ವೈದ್ಯರು ವರದಿ ಶೀಘ್ರ ಜೈಲು ಅಧಿಕಾರಿಗಳ ಕೈ ಸೇರಲಿದೆ. ಜೈಲು ಸೇರಿದ ಬಳಿಕ ನಾಲ್ಕು ತಿಂಗಳಿಂದ ನಟ ದರ್ಶನ್ ಚಿಕಿತ್ಸೆ ಪಡೆದಿಲ್ಲ. ದರ್ಶನ್ ಬೆಡ್ ಇಲ್ಲದೇ ಚಾಪೆಯ ಮೇಲೆ ಮಲಗುವ ಕಾರಣ ಅವರ ಮತ್ತಷ್ಟು ಬೆನ್ನುನೋವು ಉಲ್ಬಣವಾಗಿದೆಯಾ ಎನ್ನಲಾಗಿದೆ