ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾಗಳ ಬಳಿಕ ರೆಡಿಯಾಗ್ತಿರೋ ಡೆವಿಲ್ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆ ಇದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಚಿತ್ರದ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.
ಡೆವಿಲ್ ಸಿನಿಮಾದ ಫಸ್ಟ್ ಲುಕ್ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕ್ಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವಾ? ಎಂದು ದರ್ಶನ್ ಹೇಳಿರುವ ಡೈಲಾಗ್ ‘ಡೆವಿಲ್’ ಮೊದಲ ಟೀಸರ್ನಲ್ಲಿತ್ತು. ಈಗ ಇದರ ವಿಡಿಯೋ ಬಿಡಲಾಗಿದೆ. ಕಲರ್ಫುಲ್ ಲೋಕೇಷನ್ನಲ್ಲಿ ದರ್ಶನ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ನಟನೆಯ ತಾರಕ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪ್ರಕಾಶ್ ವೀರ್ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಆದರೆ ಶೂಟಿಂಗ್ ವೇಳೆ, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಈಗ ಗುಣಮುಖರಾಗಿರುವ ದರ್ಶನ್ ಸದ್ಯದಲ್ಲೇ ಡೆವಿಲ್ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.