ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ಸಿಕ್ಕ ಬೆನ್ನಲ್ಲೇ ದಾಸನ ಆಪ್ತ ವಲಯದಲ್ಲಿ ಗುರುತಿಸಿಕೊಂಡ ತರುಣ್ ಸುಧೀರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ..
Health Care: ದಪ್ಪ ಇದ್ದವರು ಬೇಗ ಸಣ್ಣ ಆಗಲು ಈ ಮ್ಯಾಜಿಕ್ ಟಿಪ್ಸ್ ಫಾಲೋ ಮಾಡಿ!
ದರ್ಶನ್ ಗೆ ಜಾಮೀನು ಸಿಕ್ಕಿರೋದು ಖುಷಿ ವಿಚಾರ. ದರ್ಶನ್ ಗೆ ಹೈಕೋರ್ಟ್ ನಿಂದ ಜಾಮೀನು ಸಿಗುತ್ತಿದ್ದಂತೆ ಮಾತನಾಡಿದ ಡೈರೆಕ್ಟರ್ ತರುಣ್ ಸುಧೀರ್, ಹನುಮ ಜಯಂತಿ ದಿನ ದರ್ಶನ್ ಅವರಿಗೆ ಬೇಲ್ ಸಿಕ್ಕಿದೆ. ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಟ್ರೀಟ್ಮೆಂಟ್ ಕೂಡ ನಡೆಯುತ್ತಿದೆ. ನಮಗೆ ಅವರ ಆರೋಗ್ಯ ಮುಖ್ಯ, ಮೊದಲು ಚೇತರಿಸಿಕೊಂಡು ಬರಲಿ ಎಂದಿದ್ದಾರೆ. ಈ ಪ್ರಕರಣದಿಂದ ಆರೋಪಮುಕ್ತರಾಗಿ ಹೊರಬಂದರೆ ನಮ್ಮಷ್ಟು ಖುಷಿ ಯಾರಿಗೂ ಇಲ್ಲ ಎಂದರು.
ಒಬ್ಬ ಫ್ಯಾಮಿಲಿ ಮೆಂಬರ್ ಜೊತೆಗಿಲ್ಲ ಅಂದ್ರೆ ಎಷ್ಟು ನೋವಾಗುತ್ತೋ ಅಷ್ಟೇ ನೋವು ನಮಗಿದೆ. ದರ್ಶನ್ ನಮ್ಮ ಕಣ್ಣು ಮುಂದೇನೆ ಇದ್ದಾರೆ. ಅದ್ರೆ ಜೊತೆಯಲ್ಲಿ ಇಲ್ಲ ಅನ್ನೋ ಬೇಸರ ನಮ್ಮನ್ನು ಕಾಡ್ತಿದೆ ಎಂದು ತರುಣ್ ಸುಧೀರ್ ಹೇಳಿದ್ರು. ಇದೀಗ ದರ್ಶನ್ ಬಗ್ಗೆ ಸಖತ್ ಖುಷ್ ಆಗಿದ್ದಾರೆ.
ದರ್ಶನ್ಗೆ ದೊಡ್ಡ ಫ್ಯಾನ್ ಬೇಸ್ ಇದೆ. ಅವರಿಗೆ ಬೇಲ್ ಸಿಕ್ಕಿರೋದು ಎಲ್ಲರಿಗೂ ಖುಷಿ ಇದೆ. ದರ್ಶನ್ ಜೈಲಿನಿಂದ ಹೊರಗೆ ಬರಲಿ ಅಂತ ಫ್ಯಾನ್ಸ್ ಹರಕೆ ಹೊತ್ತಿದ್ದರು. ನಾನು ಹರಕೆ ಹೊತ್ತಿರೋದನ್ನು ಹೇಳಿಕೊಳ್ಳಬಾರದು. ರೇಣುಕಾಸ್ವಾಮಿ ತಂದೆಯ ಪರಿಸ್ಥಿತಿ ಬಗ್ಗೆ ನಾನೇನು ಹೇಳೋದಕ್ಕೆ ಆಗಲ್ಲ ಎಂದರು.
ಇನ್ನೂ ಕನ್ನಡ ಚಿತ್ರರಂಗದಲ್ಲಿ 200ರಿಂದ 300 ಕೋಟಿ ರೂ. ವಹಿವಾಟು ನಡೆಸುವ ನಾಯಕ ನಟ ದರ್ಶನ್. ಚಿತ್ರರಂಗಕ್ಕೆ ಅವರ ಬಿಡುಗಡೆಯಿಂದ ಒಳ್ಳೆಯದಾಗುತ್ತದೆ. ಇನ್ನೂ ‘ಡೆವಿಲ್’ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದರು.