ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅವರು ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಬಂದಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಕೊಡಲು ನಿರಾಕರಿಸಿದೆ. ಇದರಿಂದ ದರ್ಶನ್ ಜೈಲಿನಲ್ಲೇ ಮುಂದುವರಿಯುವುದು ಅನಿವಾರ್ಯ ಆಗಿದೆ.
ಇದರ ಬೆನ್ನಲ್ಲೇ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಆರೋಪಿ ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದೆ. ಕಳೆದ ವಾರವಷ್ಟೇ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಹಾಗೂ ನ್ಯೂರೋ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು. ಇದೀಗ ಮೆಡಿಕಲ್ ರಿಪೋರ್ಟ್ ಸಲ್ಲಿಸಿರುವ ವೈದ್ಯರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಬೆನ್ನು ನೋವು ನಿಯಂತ್ರಣಕ್ಕೆ ಫಿಜಿಯೋ ಜೊತೆಗೆ ಎರಡು ಬಾರಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇಕು ಹಾಗೂ ಕೆಲವು ಮಾತ್ರೆ, ಮುಲಾಮು ನೀಡುವಂತೆ ಉಲ್ಲೇಖಿಸಿದ್ದಾರೆ.
ಭಾರತೀಯ ಆಹಾರ ನಿಗಮದಲ್ಲಿದೆ ಭರ್ಜರಿ ಉದ್ಯೋಗವಕಾಶ.! ತಿಂಗಳಿಗೆ ₹ 71,000 ಸಂಬಳ – ಇಂದೇ ಅರ್ಜಿ ಸಲ್ಲಿಸಿ
ವಿಮ್ಸ್ನ ನರರೋಗ ತಜ್ಞ ವೈದ್ಯ ಡಾ.ವಿಶ್ವನಾಥ್ ಸಲ್ಲಿಕೆ ಮಾಡಿರುವ ಮೆಡಿಕಲ್ ರಿಪೋರ್ಟ್ನಲ್ಲಿ ಆರೋಪಿ ದರ್ಶನ್ಗೆ ನರಗಳಿಂದ ಬೆನ್ನು ನೋವಾಗುತ್ತಿದೆ ಹೌದು. ಹೀಗಾಗಿ ಇಂದಿನಿಂದಲೇ ಜೈಲಿನಲ್ಲಿ ಫಿಜಿಯೋಥೆರಪಿ ನೀಡಬೇಕು ಎಂದು ಜೈಲಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತೊಂದೆಡೆ ಮೆಡಿಕಲ್ ಬೆಡ್, ಚೇರ್ ಬಗ್ಗೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನೂ ದರ್ಶನ್ ಮೆಡಿಕಲ್ ರಿಪೋರ್ಟ್ನ್ನು ಬಳ್ಳಾರಿ ಜೈಲಧಿಕಾರಿಗಳು ಮೇಲಧಿಕಾರಿಗಳಿಗೆ ಮೇಲ್ ಮಾಡಿದ್ದಾರೆ. ಜೊತೆಗೆ ಮುಂದಿನ ಚಿಕಿತ್ಸಾ ಕ್ರಮ, ಮೆಡಿಕಲ್ ಬೆಡ್, ಚೇರ್, ವೈದ್ಯಕೀಯ ಸಲಕರಣೆ ಹಾಗೂ ಕೆಲವು ಮಾತ್ರೆಗಳ ನೀಡಲು ಸಲಹೆ ಕೇಳಿದ್ದಾರೆ. ಜೈಲು ವಿಭಾಗದ ಹಿರಿಯ ಅಧಿಕಾರಿಗಳ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್, ಚೇರ್ ನೀಡುವ ಸಾಧ್ಯತೆಯಿದೆ.