ಬಳ್ಳಾರಿ: ಸ್ಯಾಂಡಲ್ವುಡ್ ನಟ ದರ್ಶನ್ ಅವರು ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪವನ್ನು ಎದುರಿಸುತ್ತಿರುವ ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗ ತಕ್ಕಮಟ್ಟಿಗೆ ಆರೋಗ್ಯವಾಗಿಯೇ ಇದ್ದರು. ಆದರೆ ಬಳ್ಳಾರಿಗೆ ಶಿಫ್ಟ್ ಆದ ನಂತರ ನಟ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಜೈಲಿಗೆ ವಿಮ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಆಗಮಿಸಿದ್ದಾರೆ.
Tata Group successors: ‘ರತನ್’ ಕಣ್ಮರೆ: 3,800 ಕೋಟಿ ರೂ. ಟಾಟಾ ಸಾಮ್ರಾಜ್ಯಕ್ಕೆ ಮುಂದಿನ ಉತ್ತರಾಧಿಕಾರಿ ಯಾರು..?
ವಿಶ್ವನಾಥ್ ತಪಾಸಣೆ ಬಳಿಕ ಆರ್ಥೋಪೆಡಿಕ್ ಸರ್ಜನ್ ದರ್ಶನ್ ಬೆನ್ನು ನೋವಿನ ಕುರಿತು ಸಂಪೂರ್ಣ ವರದಿ ನೀಡಲಿದ್ದಾರೆ. ವರದಿಯಲ್ಲಿ ದರ್ಶನ್ಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರೆ ಮಾತ್ರ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ವೈದ್ಯರ ಹೆಚ್ಚಿನ ಚಿಕಿತ್ಸೆಗೆ ಸೂಚಿಸಿದ್ದರೆ, ಈ ವೈದ್ಯರ ವರದಿಯನ್ನು ಕೋರ್ಟ್ಗೆ ಸಲ್ಲಿಸಿ ನಟ ದರ್ಶನ್ನ್ನು ಬಳ್ಳಾರಿಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.