ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು. ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು. ಬಳಿಕ ಮತ್ತೆ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ತೆರಳಿದರು. ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬಾಂಡ್ ಸಲ್ಲಿಕೆ ಪ್ರಕ್ರಿಯೆ ನಡೆಸಲು ದರ್ಶನ್ ಆಸ್ಪತ್ರೆಯಿಂದ ನೇರವಾಗಿ ಸೆಷನ್ಸ್ ಕೋರ್ಟ್ ಮುಂದೆ ಹಾಜರಾದರು. ದರ್ಶನ್ಗೆ ಸ್ನೇಹಿತ ಧನ್ವೀರ್ ಮತ್ತು ಸಹೋದರ ದಿನಕರ್ ಶ್ಯೂರಿಟಿ ನೀಡಿದರು.
ಶ್ಯೂರಿಟಿ ವೇಳೆ, ದರ್ಶನ್ ನಿಮಗೆ ಏನಾಗಬೇಕು ಎಂದು ಜಡ್ಜ್ ಕೇಳಿದರು. ಅದಕ್ಕೆ, ಸ್ನೇಹಿತ ಮತ್ತು ಸಹೋದರ ಎಂದು ಧನ್ವೀರ್ ಮತ್ತು ದಿನಕರ್ ಹೇಳಿದರು. ಕೊನೆಗೆ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ದರ್ಶನ್ ಮತ್ತೆ ಆಸ್ಪತ್ರೆಗೆ ಹಿಂದಿರುಗಿದರು. ಸಾಮಾನ್ಯವಾಗಿ ಆರೋಪಿಗಳು ಜಾಮೀನು ಬಾಂಡ್ ಸಹಿ ಹಾಕಲು ಪೆಂಡಿಂಗ್ ಬ್ರಾಂಚ್ಗೆ ತೆರಳಬೇಕಿತ್ತು. ಆದರೆ ಜನಸಾಗರ ಸೇರಿರುವ ಕಾರಣ ದರ್ಶನ್ ಪರ ವಕೀಲರು ಕೋರ್ಟ್ ಹಾಲ್ನಲ್ಲೇ ಸಹಿ ಹಾಕಲು ಮನವಿ ಮಾಡಿದ್ದು,
ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್! ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂ. ಸಾಲ ಸೌಲಭ್ಯ!
ನ್ಯಾಯಾಲಯ ದರ್ಶನ್ ಮನವಿಯನ್ನ ಸ್ವೀಕಾರ ಮಾಡಿದರು. ಅಂತಿಮವಾಗಿ ಕೋರ್ಟ್ ಹಾಲ್ನಲ್ಲೇ ಸಹಿ ಮಾಡಿದ ದರ್ಶನ್ ಅವರು ಕೋರ್ಟ್ನಿಂದ ಬಹಳ ಕಷ್ಟಪಟ್ಟು ಹೊರಗಡೆ ಬಂದರು. ಕೋರ್ಟ್ ಹೊರಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಜನ ಸೇರದಂತೆ ಸಿಟಿ ಸಿವಿಲ್ ಕೋರ್ಟ್ ಹೊರಭಾಗದಲ್ಲಿ ಪೊಲೀಸರ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.