ಮೈಸೂರು: ಬೆನ್ನು ನೋವು ಅಂತ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳು ಚಿಕಿತ್ಸೆ ಪಡೆದ ದರ್ಶನ್, ರೆಗ್ಯುಲರ್ ಬೇಲ್ ಸಿಕ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ರು. ಇದೀಗ ನಟ ದರ್ಶನ್ ಮೈಸೂರಿನ ತಮ್ಮದೇ ಫಾರಂ ಹೌಸ್ನಲ್ಲಿ ರೆಸ್ಟ್ ಮಾಡ್ತಿದ್ದಾರೆ. ಆದ್ರೆ ಬೆನ್ನು ನೋವಿನ ಹೆಚ್ಚಳ ಹಿನ್ನಲೆ ವೈದ್ಯರ ಸಲಹೆ ಪಡೆಯಲು ನಟ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ.
ಕಹಿಯಾಗಿದ್ದರೂ ಈ ಜ್ಯೂಸ್ ಅಮೃತಕ್ಕೆ ಸಮಾನ: ಹಾಗಲಕಾಯಿ ಜ್ಯೂಸ್ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ..!?
ನಟ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವಂತೆ ಕಂಡು ಬಂದಿದೆ. ನಟ ಕುಂಟುತ್ತಾ ನಡೆಯುತ್ತಿರುವುದು ಕಂಡುಬಂದಿದೆ. ಈ ವೇಳೆ, ದರ್ಶನ್ಗೆ ಧನ್ವೀರ್ ಸಾಥ್ ನೀಡಿದ್ದಾರೆ. ದರ್ಶನ್ ಆಸ್ಪತ್ರೆಗೆ ಬರುವ ವಿಚಾರ ತಿಳಿದ ಹಿನ್ನೆಲೆ ಆಸ್ಪತ್ರೆ ಆವರಣದಲ್ಲೇ ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು.