ನಟ ದರ್ಶನ್ & ಗ್ಯಾಂಗ್ಗೆ ಮತ್ತೆ 14 ದಿನಗಳಕಾಲ ನ್ಯಾಯಾಂಗ ಬಂಧನ ವಿಸ್ತರೆಣೆಯಾಗಿದೆ. ಇತ್ತ ಮನೆ ಊಟಕ್ಕಾಗಿ ಹೈಕೋರ್ಟ್ ಮೊರೆ ಹೋಗಿರೋ ದರ್ಶನ್ ಗೆ ಹಿರಿಯ ವಕೀಲರೊಬ್ಬರು ಮತ್ತೊಂದು ಶಾಕ್ ನೀಡಿದ್ದಾರೆ..ಅಷ್ಟಕ್ಕು ಡಿ ಗ್ಯಾಂಗ್ ಗೆ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲು ಕಾರಣಗಳೇ?ಮನೆಯೂಟ ಕೊಡಬಾರದು ಎಂದು ಬರೆದಿರುವ ಪತ್ರದಲ್ಲೇನಿದೆ ಅನ್ನೋದನ್ನು ತೋರಿಸ್ತೀವಿ ನೋಡಿ..
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ನೀಡಿದ ಶೋಕಾಸ್ ನೋಟಿಸ್ ಹಿಂಪಡೆಯಿರಿ; ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ!
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ಗೆ ಮತ್ತೆ ಜೈಲೇ ಗತಿಯಾಗಿದೆ. ಮತ್ತೊಮ್ಮೆ ಡಿ ಗ್ಯಾಂಗ್ ಅನ್ನು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೊಲೆ ಕೇಸ್ನಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬೆಂಗಲೂರು ಹಾಗು ತುಮಕೂರು ಜೈಲಿನಿಂದ 24 ಎಸಿಎಂಎಂ ಕೋರ್ಟ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಜಡ್ಜ್ ಎಲ್ಲಾ ಆರೋಪಿಗಳ ಹೆಸರನ್ನು ಕೂಗಿ ಕರೆಯಲಾಯಿತು.ಹೆಸರುಗಳು ಕೂಗುತ್ತಿದ್ದಂತೆ ಆರೋಪಿಗಳು ಕೈ ಎತ್ತಿ ಹಾಜರಿ ಹೇಳಿದ್ರು. ಆ ಬಳಿಕ ನ್ಯಾಯಮೂರ್ತಿ ವಿಶ್ವನಾಥ ಸಿ.ಗೌಡರ್ ಎಲ್ಲರನ್ನೂ ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡುವ ಆದೇಶ ಹೊರಡಿಸಿದರು.
ಇನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲೇ ಇಡಬೇಕೆಂದು ಮನವಿ ಮಾಡಿರೋ ಪೊಲೀಸರು ಅದಕ್ಕೆ ಕಾರಣಗಳನ್ನು ರಿಮ್ಯಾಂಡ್ ಅರ್ಜಿಯಲ್ಲಿ ನಮೂದು ಮಾಡಿದ್ದಾರೆ.
1. ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ ಕೇಸಿಗೆ ತೊಂದರೆಯಾಗುತ್ತೆ.
2. ಆರೋಪಿಗಳು ಐಡೆಂಟಿಫಿಕೇಷನ್ ಪೆರೇಡ್ ನಲ್ಲಿ ಸಾಕ್ಷಿದಾರರನ್ನು ತಡೆಯುವ ಸಾಧ್ಯತೆ ಇದೆ.
3. ಗುರುತು ಹಚ್ಚದಂತೆ ತಡೆದು ಸಾಕ್ಷಿಗಳಿಗೆ ಬೆದರಿಕೆ ಹಾಕೋ ಸಾಧ್ಯತೆ
4. ತಾಂತ್ರಿಕ ಸಾಕ್ಷಿಗಳ ಪರಿಶೀಲನೆ ವೇಳೆ ಎಲ್ಲಾ ಆರೋಪಿಗಳ ಪಾತ್ರ ಧೃಢವಾಗಿದೆ.
5. ಇನ್ನೂ ಹಲವಾರು ತಾಂತ್ರಿಕ & ವೈಜ್ಞಾನಿಕ ಸಾಕ್ಷಿ ಪರಿಶೀಲನೆ ನಡೆಯುತ್ತಿದೆ
6. ಸಾಕ್ಷಿಗಳನ್ನು ತಜ್ಞರ ಪರಿಶೀಲನೆಗೆ ಕಳುಹಿಸಿದ್ದು ವರದಿ ಬರಬೇಕಿದೆ.7. ಸೀಜ್ ಆಗಿರುವ ಸಿಡಿಆರ್ ಡಿವಿಆರ್ ಡಾಟಾ ರಿಟ್ರಿವ್ ನಡೆಯುತ್ತಿದೆ
8. ಡಾಟಾ ಪಡೆದು ಆರೋಪಿಗಳ ವಿಚಾರಣೆ ನೆಡೆಸೋದು ಬಾಕಿ
9. ನೇರವಾಗಿ ಭಾಗಿಯಾದ ಆರೋಪಿಗಳ ಸಾಕ್ಷಿ ಸಂಗ್ರಹ ಬಾಕಿ
10. ಕೃತ್ಯದ ಮುಂಚೆ, ಬಳಿಕ ಅನೇಕರ ಸಂಪರ್ಕ ಇನ್ನೂ ಲಭ್ಯವಿದೆ
11. ಇನ್ನೂ ಅನೇಕ ಸಾಕ್ಷಿ ಲಭ್ಯವಿದ್ದು 164 ಹೇಳಿಕೆ ದಾಖಲಿಸಬೇಕಿದೆ
12. ಆರೋಪಿಗಳು ಪ್ರಭಾವಿಗಳು, ಹಣಬಲ & ಅಭಿಮಾನಿ ಬಳಗ ಹೊಂದಿದ್ದಾರೆ
13 ಜಾಮೀನು ಸಿಕ್ಕರೆ ಅಭಿಮಾನಿಗಳ ಬಳಸಿ ಸಾಕ್ಷಿ ನಾಶ ಸಾಧ್ಯತೆ ಇರುತ್ತದೆ
14. ಎಫ್ಎಸ್ಎಲ್ ತಜ್ಞರ ವರದಿ ಬರಬೇಕಿದೆ
15. ಕೃತ್ಯಕ್ಕೆ ಬಳಸಿದ ವಾಹನದಲ್ಲಿ ಫಿಂಗರ್ ಪ್ರಿಂಟ್ ಲಭ್ಯವಾಗಿದೆ,ರಿಕವರಿ ಬಾಕಿ ಬಾಕಿ ಇದೆ.
ಇದಿಷ್ಟೇ ಅಲ್ಲದೆ ಮೃತನ ಕುಟುಂಬದವರಿಗೆ ಹೆದರಿಸುವ ಅಥವಾ ಆಮಿಷ ತೋರಿಸಿ ಸಾಕ್ಷಿ ಹೇಳದಂತೆ ಮಾಡುವ ಸಂಭವ ಇದೆ. ಇತ್ತಿಚೆಗೆ ಆರೋಪಿಗಳ ಪರ ಕೆಲವು ವ್ಯಕ್ತಿಗಳು ಮೃತನ ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ.ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಎಂದು ಪೊಲೀಸರು ರಿಮಾಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ..
ಮನೆಯೂಟಕ್ಕೆ ಹೈಕೋರ್ಟ್ ಮೊರೆ ಹೋಗಿರೋ ದರ್ಶನ್ ಅರ್ಜಿ ಇದೇ 21 ರಂದು ವಿಚಾರಣೆಗೆ ಬರಲಿದೆ. ಆರೋಪಿ ದರ್ಶನ್ ಮನೆ ಊಟದ ಅಗತ್ಯತೆ ಇದೆ ಇಲ್ಲವೋ ಎಂದು 10 ದಿನಗಳಲ್ಲಿ ವರದಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಮಧ್ಯೆ ದರ್ಶನ್ ಗೆ ಯಾವುದೇ ವಿಶೇಷ ಸೌಕರ್ಯ ನೀಡದಂತೆ ಕಾರಾಗೃಹ ಇಲಾಖೆ ಐ ಜಿ ಗೆ ಹಿರಿಯ ವಕೀಲ ಅಮೃತೇಶ್ ಪತ್ರ ಬರೆದಿದ್ದಾರೆ.. ದರ್ಶನ್ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತು ಪ್ರಭಾವಿ ನಟ ಆದರೆ ಯಾವುದೇ MLA,MLC, MP ಅಲ್ಲ. ಜೊತೆಗೆ ಯಾವುದೇ ಶಾಸನಬದ್ಧ ಹುದ್ದೆಯಲ್ಲಿಲ್ಲ. ವಿ ಐ ಪಿ ಸ್ಟೇಟಸ್ ಹೊಂದಿರುವ ಯಾವುದೇ ರಾಜಕಾರಣಿಯೂ ಅಲ್ಲ ಆತ ಕಾನೂನಿನ ಕಣ್ಣಿನಲ್ಲಿ ಒಬ್ಬ ಸಾಮಾನ್ಯ ಪ್ರಜೆ, ಹಾಗಾಗಿ ಕಾನೂನಿನಡಿಯಲ್ಲೇ ಪರಿಗಣಿಸಬೇಕು. ಕಾನೂನಿನಂತೆ ದರ್ಶನ್ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳುವಂತಿಲ್ಲ. ಮನೆಯ ಆಹಾರ, ಬಟ್ಟೆ,ಹಾಸಿಗೆ,ಬರೆಯುವ ಪರಿಕರ, ಎ.ಸಿ, ಟೇಬಲ್,ಚೇರ್ ಮುಂತಾದವುಗಳನ್ನು ಪಡೆಯುವಂತಿಲ್ಲ. ಕರ್ನಾಟಕ ಪ್ರಿಸನ್ಸ್ &ಕರೆಕ್ಷನಲ್ ಮ್ಯಾನ್ಯುವಲ್ 2021 ,ಪ್ರಿಸನ್ಸ್ ಆ್ಯಕ್ಟ್ 1963,ಪ್ರಿಸನ್ ರೂಲ್ಸ್ 1974 ಉಲ್ಲೇಖ ಮಾಡಿರುವ ವಕೀಲರು ಇವುಗಳ ಪ್ರಕಾರ ಯಾವುದೇ ಸಿವಿಲ್ ಮತ್ತು ಶಿಕ್ಷೆಗೊಳಪಡದ ಕೈದಿಗೆ ವಿಶೇಷ ಆಹಾರ ಮತ್ತು ಸೌಲಭ್ಯ ನೀಡುವಂತಿಲ್ಲ. ಅದಾಗ್ಯೂ ಅವಶ್ಯಕತೆಯಿದ್ದಲ್ಲಿ ಪ್ರಿಸನ್ಸ್ ಆ್ಯಕ್ಟ್ 1963 ಪ್ರಕಾರ, ಪರೀಕ್ಷೆಗೆ ಒಳಪಡಿಸಿ ಐ ಜಿ ಅನುಮೋದನೆ ನೀಡಬಹುದು. ಈಗಾಗಲೇ ಜೈಲು ನಿಯಮದಲ್ಲಿ ಕೈದಿಗಳಿಗೆ ನೀಡುವ ಆಹಾರದ ಬಗ್ಗೆ ಸ್ಪಷ್ಟ ವಾಗಿ ಹೇಳಲಾಗಿದೆ. ಆಹಾರದ ತೂಕ ಮತ್ತು ಮಾಂಸಹಾರದ ಪೂರೈಕೆಗೆ ಸಂಬಂಧಿಸಿದಂತೆ ನಮೂದಿಸಲಾಗಿದೆ. ಆದರೆ ಈ ರೀತಿಯ ಆರೋಪಗಳಿಂದ ಜೈಲಿನ ಆಹಾರದ ಗುಣಮಟ್ಟದ ಬಗ್ಗೆ & ಜೈಲು ಅಧಿಕಾರಿಗಳ ಬಗ್ಗೆ ವ್ಯತಿರಿಕ್ತ ಭಾವನೆ ಮೂಡಿಸುತ್ತದೆ. ದರ್ಶನ್ ಗೆ ಈ ಸೌಲಭ್ಯ ಸಿಕ್ಕಲ್ಲಿ ಮಿಕ್ಕ ಕೈದಿಗಳೂ ಇಂತಹ ಸೌಲಭ್ಯ ಪಡೆಯಲು ಮುಂದಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಬರದಿದ್ದಾರೆ.
ಒಟ್ಟಿನಲ್ಲಿ ಡಿ ಗ್ಯಾಂಗ್ ಗೆ ರೇಣುಕಾಸ್ವಾಮಿ ಹೆಗಲೇರಿ ಕಾಡುತ್ತಿದ್ದು. ಜೈಲು ವಾಸ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣೂತ್ತಿಲ್ಲ. ನ್ನು ಮನೆ ಊಟದ ಆಸೆಯಲ್ಲಿರೋ ದರ್ಶನ್ ಗೆ ನ್ಯಾಯಾಲಯದಿಂದ ಯಾವ ತೀರ್ಪು ಬರುತ್ತೋ ಕಾದು ನೋಡಬೇಕಿದೆ..