ಮಹದೇವಪುರ: ವಾಯುಭಾರ ಕುಸಿತದ ಕಾರಣ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಲೇ ಇದೆ. ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆ ಸಂಚಾರ ಬಹಳ ಕಷ್ಟವಾಗಿದೆ. ರಸ್ತೆಗುಂಡಿಗಳ ಕಾಟವಂತೂ ವಾಹನ ಸವಾರರನ್ನು ಹೈರಾಣಾಗಿಸಿದ್ದು, ವಾಹನ ಸವಾರರಿಗೆ ರಸ್ತೆಯಲ್ಲಿ ಗುಂಡಿಯೋ ಅಥವಾ ಗುಂಡಿಯಲ್ಲಿ ರಸ್ತೆಯೋ ಎನ್ನುವುದು ತಿಳಿಯುತ್ತಿಲ್ಲ.
ಬೆಂಗಳೂರಿಗರ ಪಾಲಿಗೆ ರಸ್ತೆಗುಂಡಿಗಳೇ ದುಸ್ವಪ್ನವಾಗಿ ಕಾಡತೊಡಗಿದೆ.ಮಹದೇವಪುರ ಕ್ಷೇತ್ರದ ವರ್ತೂರು ಹಲಸಹಳ್ಳಿ ರಸ್ತೆಯಿಂದ ಸರ್ಜಾಪುರದ ಸಂರ್ಪಕಿಸುವ ರಸ್ತೆಯು ಗುಂಡಿ ಮಯವಾಗಿರುವುದರಿಂದ ಆಕ್ರೋಶಗೊಂಡ ವರ್ತೂರಿನ ಸ್ವಾಭಿಮಾನಿ ಬಳಗ ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಸ್ವಾಭಿಮಾನಿ ಬಳಗದ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ಮಾತನಾಡಿ ವರ್ತೂರು ಹಲಸಹಳ್ಳಿ ಡೀನ್ಸ್ ಶಾಲೆ ಮತ್ತು ಫೌಂಡೇಶನ್ ಶಾಲೆಗೆ ಹಾಗೂ ಈ ರಸ್ತೆಯಿಂದ ಸರ್ಜಾಪುರ ಹಾದು ಹೋಗುವ ರಸ್ತೆ ಹದೆಗೆಟ್ಟಿದ್ದು ಮೊಣಕಾಲು ಉದ್ದ ಗುಂಡಿಗಳು ಬಿದ್ದಿದೆ,ರಸ್ತೆಯಲ್ಲಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು,ಶಾಲಾ ಮಕ್ಕಳು, ವಿಕಲಚೇತನರು ಸೇರಿದಂತೆ ಸಾರ್ವಜನಿಕರು ಈ ರಸ್ತೆಯ ಅವಾಂತರದಿಂದ ಅಪಘಾತಕ್ಕೆ ಹಿಡಾಗಿ ಆಸ್ಪತ್ರೆ ಸೇರುವ ದುಸ್ಥಿತಿ ಎದುರಾಗಿದೆ ಎಂದು ಆಕ್ರೊಶ ವ್ವ್ಯಕ್ತಪಡಿಸಿದರು.
ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಕೆರೆಯಾಂತಾಗಿದೆ, ಮಳೆಯಿಂದಾಗಿ ಡಾಂಬರೀಕರಣ ಕಿತ್ತುಹೋಗಿ ಗುಂಡಿಗಳು ಬಾಯಿತೆರೆದು ಅಪಘಾತಕ್ಕೆ ಎಡೆಮಾಡಿಕೊಡುತ್ತಿದೆ, ಇದರಿಂದ ಜನರಿಗೆ ತೀವ್ರ ಸಮಸ್ಯೆ ಗಳನ್ನು ಎದುರಿಸುವಂತಾಗಿದೆ ಯಾವ ಅಧಿಕಾರಿಗಳು ಜನಪ್ರತಿನಿಧಿಗಳು ಜನರ ಕಷ್ಟ ಕೇಳುತ್ತಿಲ್ಲ, ಅವರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಅನೇಕ ಬಾರಿ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಡಾಂಬರೀಕರಣದ ಮಾಡುವ ಮೊದಲು ಚರಂಡಿ ಮಾಡದೆ, ಕಾಟಚಾರಕ್ಕೆ ರಸ್ತೆ ಡಾಂಬರರೀಕರಣ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡದೆ ಇರುವುದು ಈ ರಸ್ತೆ ಪ್ರತ್ಯಕ್ಷ ನಿದರ್ಶನವಾಗಿದೆ, ರಸ್ತೆ ಹಾಕಿದರು ಕೆಲವೇ ತಿಂಗಳಲ್ಲಿ ರಸ್ತೆಯಲ್ಲಿ ಗುಂಡಿಗಳು ಸೃಷ್ಟಿಯಾಗಿದೆ. ಈ ಗುಂಡಿಗಳು ಅಲ್ಲಲ್ಲಿ ಬೃಹತ್ ಗಾತ್ರದ ಮೂರು- ನಾಲ್ಕು ಅಡಿಗಳಷ್ಟು ಗುಂಡಿಗಳು ಆಗಿದ್ದು,ಇಲ್ಲಿ ವಾಹನ ಚಲಾಯಿಸುವುದೇ ದುಸ್ತರ ಎನಿಸಿದೆ ಎಂದು ಕಿಡಿಕಾರಿದರು.
ಆದಷ್ಟು ಬೇಗ ಜನ ಪ್ರತಿನಿಧಿಗಳು ಹಾಗೂ ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಎತ್ತೆಚ್ಚಿಕೊಂಡು ರಸ್ತೆ ದುರಸ್ತಿಯನ್ನ ಸರಿ ಪಡಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವರ್ತೂರು ಹಲಸಹಳ್ಳಿ ಹಾಗೂ ಸ್ವಾಭಿಮಾನಿ ಬಳಗದ ಸದಸ್ಯರು ಪ್ರತಿಭಟನೆಗೆ ಕೈಜೋಡಿಸಿದ್ದರು.