ದಿನ ನಿತ್ಯ ಮೊಸರು ತಿನ್ನುವುದರಿಂದ ಹಲವು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಬೆಂಗಳೂರಿನಲ್ಲಿ ಬಲಿಗಾಗಿ ಕಾದು ಕುಂತಿವೆ ಬೃಹತ್ ಹೋರ್ಡಿಂಗ್ಸ್.. ಅಧಿಕಾರಿಗಳು ಡೋಂಟ್ ಕೇರ್!
ಮೊಸರು ಸೋಡಿಯಂ, ಪೊಟ್ಯಾಸಿಯಮ್, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಡಿ ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದ್ದರೂ ಕೆಲವು ಪದಾರ್ಥಗಳೊಂದಿಗೆ ಮೊಸರನ್ನು ಎಂದಿಗೂ ಸೇವಿಸಬಾರದು. ಏಕೆಂದರೆ ಮೊಸರನ್ನು ಕೆಲವು ಆಹಾರದೊಂದಿಗೆ ಮಿಕ್ಸ್ ಮಾಡಿ ತಿಂದರೆ ದೇಹಕ್ಕೆ ಕೆಲವು ರೀತಿ ಹಾನಿಯುಂಟಾಗುತ್ತದೆ ಎಂದು ಪೌಷ್ಟಿಕತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ ಮೊಸರಿನೊಂದಿಗೆ ಯಾವ ಆಹಾರ ಪದಾರ್ಥಗಳನ್ನು ತಿನ್ನಬಾರದು ಎಂಬುದನ್ನು ನಾವಿಂದು ತಿಳಿಯೋಣ
ಹಾಲು ಮತ್ತು ಮೊಸರು: ಹಾಲಿನೊಂದಿಗೆ ಮೊಸರನ್ನು ಸೇವಿಸುವುದನ್ನು ತಪ್ಪಿಸಿ. ಹಾಲಿನೊಂದಿಗೆ ಯಾವುದೇ ರೀತಿಯ ಹುದುಗಿಸಿದ ಆಹಾರವನ್ನು ಸೇವಿಸಬೇಡಿ. ಹೀಗೆ ಮಾಡುವುದರಿಂದ ಹೊಟ್ಟೆ ನೋವು ಮತ್ತು ಇತರ ಅನೇಕ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು
ಮೊಸರು ಮತ್ತು ಈರುಳ್ಳಿ: ಈರುಳ್ಳಿ ಮತ್ತು ಈರುಳ್ಳಿಯಿಂದ ಮಾಡಿದ ಯಾವುದೇ ಆಹಾರವನ್ನು ಮೊಸರಿನೊಂದಿಗೆ ಸೇವಿಸಬಾರದು. ಕತ್ತರಿಸಿದ ಈರುಳ್ಳಿಯನ್ನು ಸಾಮಾನ್ಯವಾಗಿ ಮೊಸರಿನ ಜೊತೆಗೆ ರೈತಾ ಮಾಡಿ ತಿನ್ನಲಾಗುತ್ತದೆ. ಆದರೆ ಆಯುರ್ವೇದದ ಪ್ರಕಾರ ಮೊಸರು ಉಷ್ಣ ಪದಾರ್ಥವಾಗಿದೆ ಮತ್ತು ಈರುಳ್ಳಿ ತಂಪಾದ ಪದಾರ್ಥವಾಗಿದೆ. ಆದ್ದರಿಂದ ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ಮೊಡವೆ, ಚರ್ಮದ ಕಿರಿಕಿರಿ ಮತ್ತು ಕೆಲವು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು
ತುಪ್ಪದ ಜೊತೆ ಮೊಸರು: ಮೊಸರನ್ನು ತುಪ್ಪದ ಜೊತೆ ತಿನ್ನುವುದು ಒಳ್ಳೆಯದಲ್ಲ. ತುಪ್ಪದಲ್ಲಿ ಕೊಬ್ಬು ಇರುವುದರಿಂದ ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ಮತ್ತು ಇವುಗಳು ನಿಮಗೆ ಆಯಾಸವನ್ನುಂಟು ಮಾಡಬಹುದು.
ಮಾವು ಮತ್ತು ಮೊಸರು: ಕೆಲವರು ಮೊಸರಿನೊಂದಿಗೆ ಮಾವಿನಕಾಯಿಯನ್ನು ತಿನ್ನುತ್ತಾರೆ. ಇನ್ನೂ ಕೆಲವರು ಮ್ಯಾಂಗೋ ಲಸ್ಸಿ, ಮ್ಯಾಂಗೋ ಶೇಕ್ ಇತ್ಯಾದಿಗಳನ್ನು ತಯಾರಿಸಿ ಕುಡಿಯುತ್ತಾರೆ. ಆದರೆ ವಾಸ್ತವವಾಗಿ ಈ ರೀತಿ ತಿನ್ನುವುದರಿಂದ ದೇಹದಲ್ಲಿ ಅಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುತ್ತವೆ. ಮೊಸರಿನೊಂದಿಗೆ ಸಿಟ್ರಸ್ ಹಣ್ಣುಗಳು: ಮೊಸರಿನೊಂದಿಗೆ ಸಿಟ್ರಸ್ ಹಣ್ಣುಗಳನ್ನು ತಿನ್ನಬೇಡಿ. ಇದನ್ನು ಟೊಮೆಟೊ, ನಿಂಬೆಹಣ್ಣು ಸೇರಿದಂತೆ ಮುಂತಾದ ಹಣ್ಣುಗಳೊಂದಿಗೆ ತಿನ್ನಬಾರದು. ಆಯುರ್ವೇದದ ಪ್ರಕಾರ ಇವುಗಳನ್ನು ವಿರುದ್ಧ ಆಹಾರಗಳೆಂದು ಪರಿಗಣಿಸಲಾಗಿದೆ. ಕೇವಲ ಮೊಸರು ಸೇವನೆ ಆರೋಗ್ಯ ಪ್ರಯೋಜನ: ಮೊಸರಿನಲ್ಲಿ ರಿಬೋಫ್ಲಾವಿನ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ ಇತ್ಯಾದಿ ಪೋಷಕಾಂಶಗಳಿವೆ. ಮತ್ತೊಂದು ಅಂಶವೆಂದರೆ ಮೊಸರು ತಿಂದರೆ ದೀರ್ಘಕಾಲದವರೆಗೆ ಮೂಳೆಗಳು ಮತ್ತು ಹಲ್ಲುಗಳು ಸದೃಢವಾಗಿರುತ್ತದೆ
ಜೀರ್ಣಶಕ್ತಿ: ಮೊಸರು ನಿಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ: ಮೊಸರು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಮೊಸರು ಸಹಾಯಕ. ಹೊಟ್ಟೆಯನ್ನು ತಂಪಾಗಿಡಲು ಸಹಾಯಕ: ಬೇಸಿಗೆ ಕಾಲದಲ್ಲಿ ತಂಪು ಪಾನೀಯವನ್ನು ಕುಡಿಯುವ ಬದಲು ಮೊಸರಿನಿಂದ ತಯಾರಿಸಲಾದ ಲಸ್ಸಿ ಕುಡಿದರೆ ಹೊಟ್ಟೆಯನ್ನು ತಂಪಾಗಿಡಬಹುದು. ಕಡೆದ ಮಜ್ಜಿಗೆ ಕೂಡ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ.