ಖ್ಯಾತ ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಬಾಲ್ಯದ ಗೆಳೆಯ ಆಂಟೋನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಬಳಿಕ ಕ್ರೈಸ್ತ ಸಂಪ್ರದಾಯದಂತೆ ಕೀರ್ತಿ ಹಾಗೂ ಆಂಟೋನಿ ಉಂಗುರು ಬದಲಾಯಿಸಿಕೊಂಡಿದ್ದರು.
ಕೀರ್ತಿ ಸುರೇಶ್ ಹಾಗೂ ಆಂಟನಿ ಮದುವೆಗೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಅಂತೆಯೇ ನಟ ದಳಪತಿ ವಿಜಯ್ ಕೂಡ ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗಳನ್ನು ಆಶೀರ್ವದಿಸಿದ್ದರು.
ಇದೀಗ ದಳಪತಿ ವಿಜಯ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡ ಕೀರ್ತಿ ಸುರೇಶ್ ನೆಚ್ಚಿನ ನಟನನ್ನು ಕೊಂಡಾಡಿದ್ದಾರೆ. ನಮ್ಮ ಕನಸಿನ ಮದುವೆಗೆ ನನ್ನ ಕನಸಿನ ಐಕಾನ್ ಸ್ಟಾರ್ ಬಂದು ಶುಭಕೋರಿದ್ದು ಹೆಚ್ಚು ಖುಷಿ ನೀಡಿದೆ ಎಂದು ಕೀರ್ತಿ ಸುರೇಶ್ ಬರೆದುಕೊಂಡಿದ್ದಾರೆ.
ನಟ ವಿಜಯ್ ಅವರ ಟಿವಿಕೆ ಪಕ್ಷದ ಸೋಶಿಯಲ್ ಮೀಡಿಯಾ ಪೇಜ್ನಲ್ಲೂ ಈ ಫೋಟೋಗಳನ್ನು ಶೇರ್ ಮಾಡಲಾಗಿದೆ. ದಳಪತಿ ಇನ್ ಕೀರ್ತಿ ಸುರೇಶ್ ವೆಡ್ಡಿಂಗ್ ಎಂದು ಟೈಟಲ್ ಕೊಟ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೀರ್ತಿ ಸುರೇಶ್, ನಟ ವಿಜಯ್ ಹಾಗೂ ನಿರ್ದೇಶಕ ಅಟ್ಲೀಗೆ ಆಪ್ತರಾಗಿದ್ದಾರೆ.
ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿ ಕೀರ್ತಿ ಸುರೇಶ್ 15 ವರ್ಷಗಳ ಕಾಲ ಪ್ರೀತಿಸಿದ್ದ ಆಂಟೋನಿ ಜೊತೆ ಹಸೆಮಣೆ ಏರಿದ್ರು. ಡಿಸೆಂಬರ್ 12 ರಂದು ಗೋವಾದಲ್ಲಿ ನಡೆದ ಕೀರ್ತಿ ಸುರೇಶ್ ಡೆಸ್ಟಿನೇಷನ್ ವೆಡ್ಡಿಂಗ್ ಸೌತ್ ಸಿನಿಮಾ ಇಂಡಸ್ಟ್ರಿಯ ಅನೇಕ ನಟ–ನಟಿಯರು ಕೂಡ ಭಾಗಿಯಾಗಿದ್ರು. ನಟ ವಿಜಯ್, ತ್ರಿಶಾ ಹಾಗೂ ನಿರ್ದೇಶಕ ಅಟ್ಲಿ ಕೂಡ ಕೀರ್ತಿ ಸುರೇಶ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು.
ಕೀರ್ತಿ ಸುರೇಶ್ ಹಾಗೂ ಆಂಟೋನಿ ಕೇರಳ ಮೂಲದವರಾಗಿದ್ರೂ ಗೋವಾದಲ್ಲಿ ಸಾಂಪ್ರದಾಯಿಕ ಮತ್ತು ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್ ಮಾಡಿದ್ರು. ಕೀರ್ತಿಯ ಹಿಂದೂ ವಿವಾಹವು ತಮಿಳು ಬ್ರಾಹ್ಮಣ ಸಂಪ್ರದಾಯಗಳಂತೆ ನಡೆದಿದೆ. ಕ್ರಿಶ್ಚಿಯನ್ ಸಂಪ್ರದಾಯದಂತೆ ಸಂಜೆ ವೈಟ್ ವೆಡ್ಡಿಂಗ್ ನಡೆದಿತ್ತು.
ಕೀರ್ತಿ ಸುರೇಶ್ ಹಲವು ವರ್ಷಗಳಿಂದ ಆಂಟೋನಿ ಅವರನ್ನು ಪ್ರೀತಿಸುತ್ತಿದ್ರು. ಕೀರ್ತಿ ಸುರೇಶ್–ಆಂಟೋನಿ ತಟ್ಟಿಲ್ 15 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರಂತೆ. ಆಂಟೋನಿ ದುಬೈ ಮೂಲದ ಉದ್ಯಮಿ ಆಗಿದ್ದಾರೆ. ಎಸ್ಪೆರೋಸ್ ವಿಂಡೋ ಸೊಲ್ಯೂಷನ್ಸ್ ಮತ್ತು ಕ್ಯಾಪ್ಲಾತ್ ಹಬೀಬ್ ಫಾರೂಕ್ ಮಾಲೀಕರಾಗಿದ್ದಾರೆ.