ಹುಬ್ಬಳ್ಳಿ: ರಾಯಾಪುರದ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಡಿ. 23ರಂದುವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ಸ್ವರ್ಣ ವರ್ಣದ ಭವ್ಯವಾದ ವೈಕುಂಠ ದ್ವಾರವನ್ನು ಸ್ಥಾಪಿಸಲಾಗುವುದು. ವೈಕುಂಠ ದ್ವಾರದ ಪೂಜೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ದೇವಾಸ್ಥಾನವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುವುದು. ವೈಕುಂಠ ದ್ವಾರವು ರಾತ್ರಿ 9 ಗಂಟೆಯವರೆಗೆ ತೆರೆದಿರಲಿದೆ ಎಂದು ವಿವರಿಸಿದರು.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕಾಗಿ ಶ್ರೀನಿವಾಸ ಗೋವಿಂದನ ಪ್ರತಿಮೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಲಕ್ಷಾರ್ಚನೆಯು ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ವೆಂಕಟೇಶ್ವ ಹೋಮ ನೆರವೇರಿಸಲಾಗುವುದು. ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ನೃತ್ಯ, ನಾಟಕ, ಸಂಗೀತ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುಮಾರು 20 ಸಾವಿರ ಭಕ್ಷಕ್ತರು ಆಗಮಿಸುವ ನಿರೀಕ್ಷೆ ಇದ್ದು, ವಾಹನಗಳ ರ್ಪಾಂಗ್ಗೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಆಗಮಿಸುವ ಎಲ್ಲರಿಗೂ ದೊನ್ನ ಪ್ರಸಾದವನ್ನು ವಿತರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಉಪಾಧ್ಯಕ್ಷ ರಘೊತ್ತಮ ದಾಸ್ ಇದ್ದರು.