ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಧ್ಯಕ್ಕೆ ದರ್ಶನ್ ಅವರು ಜಮೀನಿಗೆ ಅರ್ಜಿ ಹಾಕಲ್ಲ ಎಂದು ವಕೀಲರು ಮಾಹಿತಿ ಕೊಟ್ಟಿದ್ದಾರೆ.
ಬೆಂಕಿ ಹಚ್ಚೋದ್ರಲ್ಲಿ ಶೋಭಾ ಕರಂದ್ಲಾಜೆ ಮುಂಚೂಣಿ: ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗಿವೆ. ಇತ್ತೀಚೆಗಷ್ಟೆ ಪೊಲೀಸರು ಪ್ರಕರಣದ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಸಿದ ಬಳಿಕೆ ಕೆಲವು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆಗೂ ಮುಂಚೆಯೇ ಕೆಲವರು ಜಾಮೀನು ಅರ್ಜಿ ಸಲ್ಲಿಸಿದ್ದರು.
ದರ್ಶನ್ ಸಹ ಇದೇ ವಾರದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಇಂದು ದರ್ಶನ್ ಅನ್ನು ನೋಡಲು ಬಳ್ಳಾರಿ ಜೈಲಿಗೆ ಬಂದಿದ್ದ ಅವರ ಪರ ವಕೀಲರು ಮಾಧ್ಯಮಗಳೊಟ್ಟಿಗೆ ಮಾತನಾಡಿ, ಪ್ರಕರಣದ ವಿಚಾರವಾಗಿ ದರ್ಶನ್ ಅನ್ನು ಚರ್ಚಿಸಲಾಗಿದೆ, ನಾವು ಆರೋಪ ಪಟ್ಟಿ ಓದುತ್ತಿದ್ದೇವೆ, ದರ್ಶನ್ ಈಗಲೇ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ’ ಎಂದಿದ್ದಾರೆ.