ಬೆಂಗಳೂರು:- ಅವರು ಸ್ಯಾಂಡಲ್ ವುಡ್ ಸುಲ್ತಾನ ಕಂಡ್ರೀ. ಅಷ್ಟು ಸುಲಭವಾಗಿ ಅವರ ಕ್ರೇಜ್ ಕಮ್ಮಿ ಆಗಲ್ಲ ಬಿಡಿ. ಅವರು ನಿಂತ್ರೂ ಟ್ರೆಂಡ್, ಕುಂತ್ರೂ ಟ್ರೆಂಡ್ ಅಭಿಮಾನಿಗಳ ಪಾಲಿನ D ಬಾಸ್ ಮರ್ರೆ.
ಎಸ್, ದರ್ಶನ್ ಅಭಿಮಾನಿಗಳ ಕ್ರೇಜ್ ಎಂದೂ ಕಡಿಮೆ ಆಗೋದಿಲ್ಲ. ದರ್ಶನ್ ಜೈಲ್ ಒಳಗೆ ಹೋದಾಗಲೂ ಈ ಕ್ರೇಜ್ ಮುಂದುವರೆದಿತ್ತು. ಅದೇ ರೀತಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್ಗೆ ಒಂದು ನಂಬರ್ ಕೊಡಲಾಗಿತ್ತು. ಕೈದಿ ನಂಬರ್ 6106 ಅನ್ನೋ ಈ ನಂಬರ್ ಕೊಟ್ಟಿದ್ದೇ ತಡ, ದರ್ಶನ್ ಅಭಿಮಾನಿಗಳ ಕ್ರೇಜ್ ಯಾವ ಲೆವಲ್ಗೆ ಇತ್ತು ಗೊತ್ತಲ್ವೇ..? ಹೌದು, ಬೈಕ್, ಕಾರ್ ಹೀಗೆ ಎಲ್ಲೆಡೆ ಈ ಕೈದಿ ನಂಬರ್ ಕಾಣಿಸಿತ್ತು. ಒಂದು ರೀತಿ ಇದು ಟ್ರೆಂಡ್ ಆಗಿಯೇ ಬಿಡ್ತು.
ಇದೀಗ ದರ್ಶನ್ ಕೈದಿ ನಂಬರ್ ಬೆನ್ನಲ್ಲೇ ಟೀ ಶರ್ಟ್ ಟ್ರೆಂಡಿಂಗ್ ಶುರುವಾಗಿದೆ. ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಧರಿಸಿದ್ದ PUMA ಟೀ ಶರ್ಟ್ ಭಾರೀ ಟ್ರೆಂಡ್ ಆಗಿದೆ. ನಾಲ್ಕು ಬರಹಗಳಿದ್ದ ಟೀ ಶರ್ಟ್ ಟ್ರೆಂಡಿಂಗ್ ಜೋರಾಗಿದೆ. ದರ್ಶನ್ ಧರಿಸಿದ್ದ ಅದೇ ರೀತಿಯ ಟೀ ಶರ್ಟ್ ಅನ್ನು ಫ್ಯಾನ್ಸ್ ಧರಿಸಿದ್ದಾರೆ.
ಅದೇ ರೀತಿಯ ಟೀ ಶರ್ಟ್ ಧರಿಸಿ ಫೋಟೋಗೆ ಫೋಸ್ ಕೊಟ್ಟಿದ್ದು, ಭಾರೀ ವೈರಲ್ ಆಗಿದೆ.