ಸದ್ಯ ದರ್ಶನ್ ದುಬೈನಲ್ಲಿ ಇದ್ದಾರೆ. ಕಾಟೇರ ಸಿನಿಮಾದ ಪ್ರದರ್ಶನಕ್ಕೆ ಎಂದು ಹೋದವರು, ಅಲ್ಲಿ ಸ್ನೇಹಿತರ ಜೊತೆ ದುಬೈ ಸುತ್ತುತ್ತಿದ್ದಾರೆ. ದರ್ಶನ್ ಅಂದರೆ ಪ್ರಾಣಿಗಳ ಮೇಲೆ ವಿಪರೀತ ಕಾಳಜಿ. ಹಾಗಾಗಿ ದುಬೈನಲ್ಲಿರೋ ಹುಲಿಯೊಂದನ್ನು ದರ್ಶನ್ ಆಟವಾಡಿದ್ದಾರೆ. ಮಲಗಿರುವ ಹುಲಿ (Tiger) ಮೈ ಸವರಿದ್ದಾರೆ. ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಹುಷಾರು ಬಾಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಕಾಟೇರ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ ದುಬೈ ಕನ್ನಡಿಗರು. ಕಾಟೇರ ಸಿನಿಮಾದಲ್ಲಿನ ದರ್ಶನ್ ಪಾತ್ರ ಕಂಡು ಕುಣಿದಿದ್ದಾರೆ. ಹಾಗಾಗಿ ದುಬೈ ಕನ್ನಡಿಗರು ಮತ್ತು ದರ್ಶನ್ ಅಭಿಮಾನಿಗಳು ಒಟ್ಟಾಗಿ ದಾಸನಿಗೆ ಹೊಸ ಬಿರುದು ನೀಡಿದ್ದಾರೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ದರ್ಶನ್ ಗೆ ಕರುನಾಡ ಅಧಿಪತಿ (Karunaada Adhipati) ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಕಾಟೇರ (Katera) ಸಿನಿಮಾದ ಶೋ ದುಬೈನಲ್ಲಿ ಮೊನ್ನೆ ನಡೆದಿದೆ. ದುಬೈನಲ್ಲೂ (Dubai) ಕಾಟೇರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಅಭಿಮಾನಿಗಳ ಜೊತೆ ಸಿನಿಮಾ ನೋಡಿ ದರ್ಶನ್ ಸಂಭ್ರಮಿಸಿದ್ದಾರೆ.