ಹುಬ್ಬಳ್ಳಿ: ಇಲ್ಲಿನ ಉಣಕಲ್ನ ಅಚ್ಚವ್ವ ಕಾಲೊನಿಯಲ್ಲಿ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬರು ಅಯ್ಯಪ್ಪ ಮಾಲಾಧಾರಿ ಸಾವಿಗೀಡಾಗಿದ್ದಾರೆ. ಆ ಮೂಲಕ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಲಿಂಗರಾಜ ಬೀರನೂರ(19) ಮೃತ ಅಯ್ಯಪ್ಪ ಮಾಲಾಧಾರಿ. ಬಾಕಿ ಐವರಿಗೆ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಭಾನುವಾರ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಾರಿ ಗಾಯಗೊಂಡಿದ್ದರು. 9 ಜನರ ಪೈಕಿ ನಿನ್ನೆ ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (18) ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದರೆ, ಇಂದು ಬೆಳಿಗ್ಗೆ ರಾಜು ಮೂಗೇರಿ ಸಾವನ್ನಪ್ಪಿದ್ದ. ಮೃತ ರಾಜು ಮೋಗೇರಿ ಮೊದಲ ಬಾರಿ ಅಯ್ಯಪ್ಪ ಮಾಲೆ ಧರಿಸಿದ್ದ. ರಾಜು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
Pearl Farming: ರೈತರೇ ಗಮನಿಸಿ.. ಮುತ್ತು ಕೃಷಿಯಲ್ಲಿದೆ ಭರ್ಜರಿ ಲಾಭ..! ವರ್ಷಕ್ಕೆ 10 ಲಕ್ಷ ಗಳಿಸಬಹುದು
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಘೋರ ದುರಂತವನ್ನು ಸರ್ಕಾರ ಗಂಭೀರವಾಗಿ ಪರಿಣಮಿಸಿತ್ತು. ಹೀಗಾಗಿ ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದಲ್ಲದೆ ಕಿಮ್ಸ್ ವೈದ್ಯರು ರಾಜ್ಯ ಮತ್ತು ದೇಶದ ನಾನಾ ಭಾಗದ ಎಕ್ಸಪರ್ಟ್ ವೈದ್ಯರಿಂದ ಮಾಹಿತಿ ಪಡೆದುಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.