ಬೆಂಗಳೂರು: ಅದೊಂದು ಸ್ಫೋಟ ಇಡೀ ಏರಿಯಾ ಜನರನ್ನೇ ಬೆಚ್ಚಿ ಬೀಳಿಸಿತ್ತು.ಸ್ಫೋಟದ ಸದ್ದು ಎದೆ ನಡುಗುವಂತೆ ಮಾಡಿತ್ತು..ಮನೆಗಳೇ ಛಿದ್ರ ಛಿದ್ರವಾಗಿದ್ದವು..ಆಗ ತಾನೆ ಮಲಗಿ ಎದ್ದವರು ಆಸ್ಪತ್ರೆ ಸೇರಿದ್ರು.ಇದು ಒಂದು ಕಡೆ ಆದ್ರೆ ರಾಜಾಜಿನಗರ ಮೆಟ್ರೊ ನಿಲ್ದಾಣ ಪಕ್ಕದಲ್ಲೇ ನಿಂತಿದ್ದ ಬೈಕ್ ಗಳು ಬೆಂಕಿಗೆ ಆಹುತಿ ಆಗಿದೆ.
ಆತಂಕದಲ್ಲೇ ಓಡಾಡ್ತಿರೊ ಜನ..ಪೀಸ್ ಪೀಸ್ ಆಗಿ ಬಿದ್ದಿರೊ ಮನೆಯ ಗೋಡೆ..ಛಿದ್ರ ಛಿದ್ರವಾಗಿರೊ ಕಿಟಕಿ ಗಾಜು..ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿರೊ ವಸ್ತುಗಳು..ಈ ದೃಶ್ಯಗಳೇ ಘಟನೆಯ ಭೀಕರತೆ ಎಷ್ಟಿದೆ ಅನ್ನೋದನ್ನ ಹೇಳ್ತಿವೆ..
ಹೌದು..ಇದು ಯಲಹಂಕದಲ್ಲಿರುವ ಎಲ್ ಬಿ ಎಸ್ ಲೇಔಟ್..ಈ ಕಟ್ಟಡದಲ್ಲಿ ಅಂಟಿಕೊಂಡಂತೆ ಐದು ಮನೆಗಳಿವೆ..ಇಲ್ಲಿನ ಜನ ರಾತ್ರಿ ಮಲಗಿ ಬೆಳಗ್ಗೆ ಏಳೊ ಸಮಯ..7.10 ರಲ್ಲಿ ದುರಂತವೊಂದು ಸಂಭವಿಸಿಬಿಟ್ಟಿತ್ತು..ಮದ್ಯದ ಮನೆಯಲ್ಲಿ ಸಂಭವಿಸಿದ ಸ್ಫೋಟ ಐದು ಮನೆಗಳಿಗೆ ಹಾನಿ ಮಾಡಿದೆ..ಗೋಡೆಗಳೇ ಉರುಳಿಬಿದ್ದಿವೆ..ಕಿಟಕಿ ಗಾಜುಗಳು ಪುಡಿ ಪುಡಿ ಯಾಗಿದೆ..ಘಟನೆಯಿಂದಾಗಿ ಮನೆಯಲ್ಲಿದ್ದ ಪಸಿಯಾ ಭಾನು,ಹಸ್ಮಾ ಎಂಬುವವರಿಗೆ ಗಂಭೀರ ಗಾಯವಾಗಿದ್ದು.ಸಲ್ಮಾ,
ಶಾಹಿದ್ ಸೇರದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ.. ಪಸಿಯಾ ಭಾನು ,ಹಸ್ಮಾ ಇಬ್ಬರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು..ಉಳಿದ ಐವರಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಕೊಡಲಾಗ್ತಿದೆ..
ಘಟನಾ ಸ್ಥಳಕ್ಕೆ ಯಲಹಂಕ ಪೊಲೀಸರು,ಅಗ್ನಿಶಾಮಕ ಸಿಬ್ಬಂದಿ,ಗ್ಯಾಸ್ ಏಜೆನ್ಸಿ ಸಿಬ್ಬಂದಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ..ಮೇಲ್ನೋಟಕ್ಕೆ ಇದು ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಸಂಭವಿಸಿರುವ ಅವಘಡ ಎನ್ನಲಾಗ್ತಿದೆ…ನಿನ್ನೆ ಅಷ್ಟೇ ಹಸ್ಮಾ ಭಾನು ಎಂಬುವವರು ಮನೆಗೆ ಹೊಸ ಗ್ಯಾಸ್ ತರಿಸಿಕೊಂಡಿದ್ದರು ರಾತ್ರಿ ಇಡೀ 14 ಕೆಜಿ ಅಷ್ಟು ಗ್ಯಾಸ್ ರಾತ್ರಿ ಸೋರಿಕೆ ಆಗಿದೆ..ಹೊರಹೋಗಲು ಸರಿಯಾದ ವೆಂಟಿಲೇಷನ್ ವ್ಯವಸ್ಥೆ ಕೂಡ ಇಲ್ಲ…ಬೆಳಗ್ಗೆ ಎದ್ದು ಸ್ಟೌ ಹಚ್ಚುವಾಗ ಸ್ಫೋಟಗೊಂಡಿರೊ ಅನುಮಾನ ಇದೆ..ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಗೆ ಕಾರಣ ಏನು ಅನ್ನೋದು ಗೊತ್ತಾಗಲಿದೆ
ಹೌದು ಗ್ಯಾಸ್ ಅನಿಲ ಸೋರಿಕೆ ದುರಂತ ಒಂದು ಕಡೆ ಆದ್ರೆ ರಾಜಾಜಿನಗರ ಮೆಟ್ರೊ ನಿಲ್ದಾಣ ಸಮೀಪ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ..ರಾಜಾಜಿನಗರ ಮೆಟ್ರೋ ನಿಲ್ದಾಣ ಪಕ್ಕದಲ್ಲೇ ನಿಲ್ಲಿಸಿದ್ದ ನಾಲ್ಕು ಬೈಕ್ ಗಳು ಬೆಂಕಿಗಾಹುತಿಯಾಗಿದೆ..ಬೆಳಗ್ಗೆ 6.10 ರ ಸುಮಾರಿಗೆ ಈ ಘಟನೆ ನಡೆದಿದ್ದು,ಬೆಳಗ್ಗೆ ಟ್ಯಾಷನ್ ಗೆ ನಂದಿದ್ದ ವಿದ್ಯಾರ್ಥಿನಿಯರು ಬೈಕ್ ನಿಲ್ಲಿಸಿ ಹೋಗಿದ್ರು ವಾಪಸ್ಸು 7.30 ಕ್ಕೆ ಬರುವಷ್ಟರಲ್ಲಿ ಸುಟ್ಟು ಕರಕಲಾದ ಬೈಕ್ ಕಂಡಿದೆ..ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮತ್ತೆರಡು ಬೈಕ್ ಕೂಡ ಸುಟ್ಟುಹೋಗಿದೆ.
ಮಹಾಲಕ್ಷ್ಮೀ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು..ಪ್ರಕರಣ ದಾಖಲಿಸಿಕೊಂಡು ಕೃತ್ಯಕ್ಕೆ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.