ಚೆನ್ನೈ:- ಸೈಕ್ಲೋನ್ ಎಫೆಕ್ಟ್ ಹಿನ್ನೆಲೆ, ತಮಿಳುನಾಡಿನಲ್ಲಿ 2 ದಿನ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
108 ಸಿಬ್ಬಂದಿಗಳ ವೇತನ ಪಾವತಿ ಆಗಿದೆ: ಸಚಿವ ದಿನೇಶ್ ಗುಂಡೂರಾವ್ ಅಚ್ಚರಿ ಹೇಳಿಕೆ!
ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧತೆ ಇದೆ. ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ ಸುರಿದಿದೆ.
ಕವಲಿ ಮತ್ತು ಒಂಗೋಲೆಯಲ್ಲಿ ಕ್ರಮವಾಗಿ 67ಮಿ.ಮೀ ಹಾಗೂ 63ಮಿ.ಮೀ ಮಳೆ ದಾಖಲಾಗಿದೆ. ಮಿನಂಬಕ್ಕಂ, ನುಂಗಂಬಾಕ್ಕಂ, ಪುದುಚೇರಿ ಮತ್ತು ಕಡಲೂರುಗಳಲ್ಲಿ 15ಮಿ.ಮೀ ಮಳೆಯಾಗಿದೆ. ದಕ್ಷಿಣ ಕರಾವಳಿ ತಮಿಳುನಾಡು ಮತ್ತು ರಾಜ್ಯದ ಒಳಭಾಗಗಳಲ್ಲಿ ಅಲ್ಪ ಪ್ರಮಾಣದ ಸುರಿದಿದೆ.
ಮುಂದಿನ 48 ಗಂಟೆಗಳಲ್ಲಿ ಬಾಪಟ್ಲಾ, ಕವಾಲಿ, ಒಂಗೋಲ್, ನೆಲ್ಲೂರು, ಶ್ರೀಹರಿಕೋಟಾ, ಚೆನ್ನೈ, ಕಾಂಚೀಪುರಂ, ತಾಂಬರಂ, ಪುದುಚೇರಿ, ಕಡಲೂರು ಮತ್ತು ಕಾರೈಕಲ್ನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ವ್ಯವಸ್ಥೆಯು ಈ ಮಳೆಗೆ ಕಾರಣವಾಗಿದೆ. ಇದು ವಿಶೇಷವಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳು ಮತ್ತು ಚೆನ್ನೈ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.