ಬೆಂಗಳೂರು:- ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದ್ದು, ಇವರ ಮೋಸದ ಜಾಲಕ್ಕೆ ಎಷ್ಟೋ ಅಮಾಯಕರು ಸಿಲುಕಿ ಲಕ್ಷ- ಲಕ್ಷ, ಅಷ್ಟೇ ಯಾಕೆ ಕೋಟಿ-ಕೋಟಿ ಕಳೆದುಕೊಂಡ ಉದಾಹರಣೆ ಸಾಕಷ್ಟಿದೆ.
ಬೆಂಗಳೂರಿನ ಕಳ್ಳರು ಹೀಗೂ ಇದ್ದಾರೆ ಹುಷಾರ್! ಬೈಕ್ ಮಾಲೀಕರೇ ಈ ಸುದ್ದಿ ನೋಡಿ!
ಇದೀಗ ಸೈಬರ್ ಚೋರರ ಹಾದಿ ಕೊಂಚ ಬದಲಾಗಿದೆ. ಹಿರೋಯಿನ್ ಗಳ ಹೆಸರನ್ನು ಬಿಡದೆ ವಂಚಿಸುತ್ತಿದ್ದಾರೆ. ಹಿರೋಯಿನ್ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದ್ದು, ನಕಲಿ ನಂಬರ್ ತೆಗೆದುಕೊಂಡು ಅದಕ್ಕೆ ನಟಿ ಫೋಟೋ ಹಾಕಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ. ಖ್ಯಾತ ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ ವಂಚನೆ ಎಸಗಲಾಗಿದೆ. ಶರಣ್ಯ ಶೆಟ್ಟಿಯ DP ಯನ್ನು ಫೋಟೋಗೆ ಹಾಕಿಕೊಂಡು ವಂಚನೆ ಎಸಗಲಾಗಿದ್ದು, ಸ್ವಲ್ಪ ಹಣದ ಅವಶ್ಯಕತೆ ಇತ್ತು ಹೀಗಾಗಿ ಹಣ ಇದ್ದರೆ ಕಳಿಸಿ ಎಂದು ಮೆಸೇಜ್ ಹಾಕಿದ್ದಾರೆ.
ಬೇರೆ ನಕಲಿ ನಂಬರ್ ಪಡೆದುಕೊಂಡು ಅದರಲ್ಲಿ ಶರಣ್ಯ ಶೆಟ್ಟಿಯ ಹೆಸರು ಬರುವಂತೆ ಮಾಡಿ ಕಿರಾತಕರು ಡಿ.ಪಿ ಹಾಕಿದ್ದಾರೆ. ನಂತರ ಇಂತಿಷ್ಟು ಹಣ ಬೇಕು ಎಂದು ಕೇಳಿ ವಂಚನೆ ಎಸಗಲಾಗಿದೆ. ಈ ಬಗ್ಗೆ ತಮ್ಮ ಅಸಲಿ ಖಾತೆಯಲ್ಲಿ ನಟಿ ಶರಣ್ಯ ಬರೆದುಕೊಂಡಿದ್ದು, ಇದೊಂದು ನಕಸಿ ವಾಟ್ಸ್ ಅಪ್ ಅದನ್ನು ನಂಬಿ ಯಾರು ಹಣ ಕಳಿಸಬೇಡಿ. ಅಂತಹ ಖದೀಮರ ವಿರುದ್ಧ ನಾನು ಸೈಬರ್ ಕ್ರೈಂ ನಲ್ಲಿ ದೂರು ನೀಡುತ್ತೇನೆ ಎಂದು ನಟಿ ಹೇಳಿದ್ದಾರೆ.