ಬೆಂಗಳೂರು: ನಿಮ್ಮದು ಏನಾದ್ರು ಪ್ರಮುಖ ಬ್ಯಾಂಕ್ ಕೆಲಸಗಳಿದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಏಕೆಂದರೆ, 2025 ಜನವರಿ ತಿಂಗಳ ಬ್ಯಾಂಕ್ ರಜಾ ದಿನಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ದೇಶದ ವಿವಿಧೆಡೆ ವಿಶೇಷ ದಿನಗಳ ನಿಮಿತ್ತ ಯಾವೆಲ್ಲಾ ದಿನ ರಜೆ ಇರುತ್ತದೆ ಎಂಬುದರ ಮಾಹಿತಿ ನೀಡಲಾಗಿದೆ. ಹೀಗಾಗಿ ಗ್ರಾಹಕರು ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬ್ಯಾಂಕಿಂಗ್ ವಹಿವಾಟುಗಳನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬೇಕಿದೆ.
Eye Care Tips: ಕಣ್ಣಿನ ರೆಪ್ಪೆಯಲ್ಲಾಗುವ ಕುರು ಸಮಸ್ಯೆಗೆ ಕಾರಣಗಳೇನು..? ಬಂದಾಗ ಏನು ಮಾಡಬೇಕು..? ಇಲ್ಲಿದೆ ಉತ್ತರ
ಜನವರಿ 1ರಂದು ಕೆಲವು ಬ್ಯಾಂಕ್ಗಳು ರಜೆಯಲ್ಲಿರುತ್ತವೆ. ಮೊದಲ ದಿನ ಬ್ಯಾಂಕ್ಗೆ ತೆರಳುವ ಪ್ಲಾನ್ ಮಾಡಿಕೊಂಡಿದ್ರೆ ಮುಂದೂಡಿಕೆ ಮಾಡೋದು ಒಳ್ಳೆಯದು. ಇನ್ನುಳಿದಂತೆ ಜನವರಿಯಲ್ಲಿ ಯಾವ ದಿನ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತೆ ಎಂಬುದರ ಮಾಹಿತಿ ಇಲ್ಲಿದೆ.
ಜನವರಿ-2025ರ ಬ್ಯಾಂಕ್ ರಜಾದಿನಗಳ ಪಟ್ಟಿ
ಜನವರಿ 1: ಹೊಸ ವರ್ಷದ ದಿನ
ಜನವರಿ 2: ಹೊಸ ವರ್ಷ ಮತ್ತು ಮನ್ನಂ ಜಯಂತಿ
ಜನವರಿ 5: ಭಾನುವಾರ
ಜನವರಿ 6: ಗುರು ಗೋಬಿಂದ್ ಸಿಂಗ್ ಜಯಂತಿ
ಜನವರಿ 11: ಎರಡನೇ ಶನಿವಾರ
ಜನವರಿ 12: ಭಾನುವಾರ ಮತ್ತು ಸ್ವಾಮಿ ವಿವೇಕಾನಂದ ಜಯಂತಿ
ಜನವರಿ 14: ಮಕರ ಸಂಕ್ರಾಂತಿ ಮತ್ತು ಪೊಂಗಲ್
ಜನವರಿ 15: ತಿರುವಳ್ಳುವರ್ ದಿನ, ಮಾಘ ಬಿಹು ಮತ್ತು ಮಕರ ಸಂಕ್ರಾಂತಿ
ಜನವರಿ 16: ಉಜ್ಜವರ ತಿರುನಾಳ್
ಜನವರಿ 19: ಭಾನುವಾರ
ಜನವರಿ 22: ಇಮೊಯಿನ್
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25: ನಾಲ್ಕನೇ ಶನಿವಾರ
ಜನವರಿ 26: ಗಣರಾಜ್ಯೋತ್ಸವ
ಜನವರಿ 30: ಸೋನಮ್ ಲೋಸರ್
ಜನವರಿಯಲ್ಲಿನ ಬ್ಯಾಂಕ್ ರಜಾದಿನಗಳನ್ನು ಇಲ್ಲಿ ನೀಡಲಾಗಿದೆ. ಈ ವೇಳಾಪಟ್ಟಗೆ ಅನುಗುಣವಾಗಿ ನೀವು ನಿಮ್ಮ ಕೆಲಸವನ್ನು ನಿಗದಿಪಡಿಸಿಕೊಳ್ಳಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) 2025 ರ ಅಧಿಕೃತ ಬ್ಯಾಂಕ್ ರಜಾದಿನಗಳನ್ನು ಇನ್ನೂ ಘೋಷಿಸಿಲ್ಲ. ಇವೆಲ್ಲವೂ ಸಾಮಾನ್ಯ ರಜೆಗಳ ಮಾಹಿತಿ ಇಲ್ಲಿದೆ. ಕೆಲ ಪ್ರಾದೇಶಿಕ ಹಬ್ಬಗಳಂದು ಆಯಾ ಪ್ರದೇಶದಲ್ಲಿ ಮಾತ್ರ ರಜೆ ಇರುತ್ತದೆ. ಪ್ರಮುಖ ಹಬ್ಬಗಳನ್ನು ಆಚರಿಸುವ ದಿನ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಇನ್ನುಳಿದಂತೆ ರಜಾದಿನಗಳಲ್ಲಿ ಎಂದಿನಂತೆ ಎಟಿಎಂ ಸೇವೆ ಗ್ರಾಹಕರಿಗೆ ಲಭ್ಯವಿರುತ್ತದೆ. ಆನ್ಲೈನ್ ಮೂಲಕವೂ ಗ್ರಾಹಕರು ಯಾವುದೇ ಅಡೆತಡೆಯಿಲ್ಲದೇ ಹಣಕಾಸಿನ ವ್ಯವಹಾರವನ್ನು ನಡೆಸಬಹುದಾಗಿದೆ. ಈ ರಜಾದಿನಗಳನ್ನು ನಿಮ್ಮ ಹತ್ತಿರದ ಬ್ಯಾಂಕ್ ಕಚೇರಿಯಲ್ಲಿ ದೃಢೀಕರಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಕೆಲಸವನ್ನು ನಿರ್ವಹಿಸಿ ಇದರಿಂದ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.