ಬೆಂಗಳೂರು: ನಾಳೆ ಇಂದ ನವೆಂಬರ್ ಮುಗಿದು ಡಿಸೆಂಬರ್ ತಿಂಗಳು ಆರಂಭವಾಗಲಿದೆ. ಪ್ರತಿ ತಿಂಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ತಿಂಗಳು ಬ್ಯಾಂಕ್ ರಜೆ ಘೋಷಿಸಿದೆ. ಡಿಸೆಂಬರ್ ನಲ್ಲಿ ಹೆಚ್ಚು ಬ್ಯಾಂಕ್ ರಜಾದಿನಗಳು ಬರಲಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ಅಲರ್ಟ್ ಆಗಿರುವುದು ಉತ್ತಮ. ಬ್ಯಾಂಕಿನಲ್ಲಿ ಸಾಮಾನ್ಯವಾಗಿ ಯಾವಾಗಲೂ ಯಾವುದೋ ಒಂದು ಕೆಲಸ ಇರುತ್ತೆ. ಹಾಗಾಗಿ ರಜಾದಿನಗಳ ದಿನಾಂಕಗಳು ನಮಗೆ ತಿಳಿದಿಲ್ಲದಿದ್ದರೆ,
ನಮ್ಮ ಕೆಲಸವು ವಿಳಂಬವಾಗಬಹುದು ಮತ್ತು ಸಮಯ ವ್ಯರ್ಥವಾಗಬಹುದು. ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಮಸ್ಯೆಗಳು, ಠೇವಣಿ, ಸಾಲ ಸೇರಿದಂತೆ ಯಾವುದೇ ಅಗತ್ಯವಿದ್ದರೂ ಬ್ಯಾಂಕ್ಗೆ ಹೋಗಲೇಬೇಕಾಗುತ್ತದೆ. ಮುಂದಿನ ತಿಂಗಳು, ಅಂದರೆ 2024ರ ಡಿಸೆಂಬರ್ ಡಿಸೆಂಬರ್ನಲ್ಲಿ ಒಟ್ಟಾರೆ ರಜಾ ದಿನಗಳ ಸಂಖ್ಯೆ 17 ಆಗುತ್ತದೆ. ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಡಿಸೆಂಬರ್ನಲ್ಲಿ 8 ರಜಾದಿನಗಳು ಮಾತ್ರವೇ ಇರುವುದು.
2024ರ ಡಿಸೆಂಬರ್ನಲ್ಲಿ ಬ್ಯಾಂಕುಗಳ ರಜಾದಿನಗಳ ಪಟ್ಟಿ
- ಡಿಸೆಂಬರ್ 1: ಭಾನುವಾರದ ರಜೆ
- ಡಿಸೆಂಬರ್ 3, ಮಂಗಳವಾರ: ಸೇಂಟ್ ಫ್ರಾನ್ಸಿಸ್ ಜೇವಿಯರ್ ಔತಣ (ಗೋವಾದಲ್ಲಿ ರಜೆ)
- ಡಿಸೆಂಬರ್ 8: ಭಾನುವಾರದ ರಜೆ
- ಡಿಸೆಂಬರ್ 14: ಎರಡನೇ ಶನಿವಾರದ ರಜೆ
- ಡಿಸೆಂಬರ್ 12, ಗುರುವಾರ: ಪಾ ತೋಗನ್ ನೆಂಗ್ಮಿಂಜಾ ಸಾಂಗ್ಮಾ (ಮೇಘಾಲಯದಲ್ಲಿ ರಜೆ)
- ಡಿಸೆಂಬರ್ 15: ಭಾನುವಾರದ ರಜೆ
- ಡಿಸೆಂಬರ್ 18, ಬುಧವಾರ: ಗುರು ಘಾಸಿದಾಸ್ ಜಯಂತಿ, ಉ ಸೋಸೋ ತಾಮ್ ಪುಣ್ಯತಿಥಿ (ಪಂಜಾಬ್, ಹರ್ಯಾಣದಲ್ಲಿ, ಹಾಗು ಮೇಘಾಲಯದಲ್ಲಿ ರಜೆ)
- ಡಿಸೆಂಬರ್ 19, ಗುರುವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
- ಡಿಸೆಂಬರ್ 22: ಭಾನುವಾರದ ರಜೆ
- ಡಿಸೆಂಬರ್ 24, ಮಂಗಳವಾರ: ಕ್ರಿಸ್ಮಸ್, ಗುರು ತೇಗ್ ಬಹದೂರ್ ಬಲಿದಾನ ದಿನ (ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹಾಗೂ ಪಂಜಾಬ್, ಹರ್ಯಾಣದಲ್ಲಿ ರಜೆ)
- ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬಕ್ಕೆ ದೇಶಾದ್ಯಂತ ಎಲ್ಲೆಡೆ ರಜೆ
- ಡಿಸೆಂಬರ್ 26, ಗುರುವಾರ: ಮೇಘಾಲಯ, ನಾಗಾಲ್ಯಾಂಡ್ ಮೊದಲಾದ ಕೆಲವೆಡೆ ರಜೆ
- ಡಿಸೆಂಬರ್ 27, ಶುಕ್ರವಾರ: ನಾಗಾಲ್ಯಾಂಡ್ನಲ್ಲಿ ರಜೆ
- ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
- ಡಿಸೆಂಬರ್ 29: ಭಾನುವಾರದ ರಜೆ
- ಡಿಸೆಂಬರ್ 30, ಸೋಮವಾರ: ಟಮು ಲೋಸರ್, ಯು ಕಿಯಾಂಗ್ ನಾಂಗ್ಬಾ (ಸಿಕ್ಕಿಂ, ಮೇಘಾಲಯದಲ್ಲಿ ರಜೆ)
- ಡಿಸೆಂಬರ್ 31, ಮಂಗಳವಾರ: ಹೊಸ ವರ್ಷಾಚರಣೆ ಪ್ರಯುಕ್ತ ಮಿಜೋರಾಂನಲ್ಲಿ ರಜೆ
ಕರ್ನಾಟಕದಲ್ಲಿ ಡಿಸೆಂಬರ್ನಲ್ಲಿ 8 ಬ್ಯಾಂಕ್ ರಜಾದಿನಗಳು
ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಒಂದೇ ಒಂದು ಸಾರ್ವತ್ರಿಕ ರಜೆ ಇರುವುದು. ಅದು ಡಿಸೆಂಬರ್ 25ರ ಕ್ರಿಸ್ಮಸ್ ಹಬ್ಬಕ್ಕೆ. ಅದು ಬಿಟ್ಟರೆ ಈ ತಿಂಗಳು ಒಂದು ಹೆಚ್ಚುವರಿ ಭಾನುವಾರ ಸಿಕ್ಕಿದೆ. ಒಟ್ಟು ಐದು ಭಾನುವಾರಗಳು ಹಾಗೂ ಎರಡು ಶನಿವಾರದ ರಜೆಗಳಿವೆ. ಕ್ರಿಸ್ಮಸ್ ಹಬ್ಬವೂ ಸೇರಿದರೆ ಡಿಸೆಂಬರ್ನಲ್ಲಿ ಕರ್ನಾಟಕದಲ್ಲಿ ರಜಾದಿನಗಳ ಸಂಖ್ಯೆ 8 ಆಗುತ್ತದೆ.
- ಡಿಸೆಂಬರ್ 1: ಭಾನುವಾರದ ರಜೆ
- ಡಿಸೆಂಬರ್ 8: ಭಾನುವಾರದ ರಜೆ
- ಡಿಸೆಂಬರ್ 14: ಎರಡನೇ ಶನಿವಾರದ ರಜೆ
- ಡಿಸೆಂಬರ್ 15: ಭಾನುವಾರದ ರಜೆ
- ಡಿಸೆಂಬರ್ 22: ಭಾನುವಾರದ ರಜೆ
- ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ
- ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
- ಡಿಸೆಂಬರ್ 29: ಭಾನುವಾರದ ರಜೆ