ಮುಂಬೈ: ಭಾರತ ಪ್ರಸಕ್ತ ವರ್ಲ್ಡ್ಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗಿದ್ದು, ಸೆಮೀಸ್ ಪ್ರವೇಶಿಸಿದೆ. ಇನ್ನೂ ಒಂದು ಪಂದ್ಯ ಇದೆ ಆದ್ರೂ, ಭಾರತ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಖಾತ್ರಿಪಡಿಸಿಕೊಂಡಿದೆ.
ಬಾರತದ ಎದುರು ಸೆಮೀಸ್ನಲ್ಲಿ ಎದುರುಗೊಳ್ಳುವ ತಂಡ ಯಾವುದು ಎಂಬುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಮೊದಲ ಸ್ಥಾನದಲ್ಲಿ ಮುಂದುವರಿದಿರುವ ಬಾರತ ಅಂಕಪಟ್ಟಿಯ 4ನೇ ತಂಡದ ವಿರುದ್ದ ಸೆಮೀಸ್ ಕಾದಾಡಲಿದೆ. ಆದರೇ, 4ನೇ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನೋ ಲೆಕ್ಕಾಚಾರ ಇನ್ನೂ ಹಲವು ಪಂದ್ಯಗಳಲ್ಲಿ ನಿರ್ಧಾರವಾಗಲಿದೆ.
ನ್ಯೂಜಿಲೆಂಡ್, ಅಥವಾ ಅಫ್ಘಾನಿಸ್ತಾನ ಭಾರತದ ಎದುರಾಳಿ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯ ನವೆಂಬರ್ 15ರಂದು ಭಾರತ ತನ್ನ ಸೆಮೀಸ್ ಆಡಲಿದೆ. ಆ ಸ್ಥಾನಕ್ಕೆ ಪಾಕ್ ಬಂದದ್ದೇ ಆದಲ್ಲಿ, ಪಂದ್ಯದ ದಿನ ಮತ್ತು ಸ್ಥಳ ಬದಲಾವಣೆ ಆಗಲಿದೆ. ಪಾಕ್ 4ನೇ ಸ್ಥಾನಕ್ಕೆ ಬಂದರೆ, ಭಾರತ 16ರಂದು ಈಡನ್ ಗಾರ್ಡನ್ನಲ್ಲಿ ಪಂದ್ಯ ಆಡಲಿದೆ. ಇದಕ್ಕೆ ಬಿಸಿಸಿಐ ಮತ್ತು ಪಿಸಿಬಿಯ ನಡುವಿನ ಒಪ್ಪಂದವೇ ಕಾರಣವಾಗಿದೆ. ಅಂಕಪಟ್ಟಿ 2 ಮತ್ತು 3ನೇ ಸ್ಥಾನಕ್ಕೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ.