ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಹೇಳಿಕೆಗಳು ಕಾಂಗ್ರೆಸ್ ಗೆ ತೀವ್ರ ತಲೆನೋವಾಗಿ ಪರಿಣಮಿಸಿವೆ. ಹೀಗಾಗಿ ಜಮೀರ್ ನಾಲಿಗೆಗೆ ನಿಯಂತ್ರಣ ಹಾಕಿ ಎಂಬ ಒತ್ತಾಯ ಕೇಳಿ ಬಂದಿದೆ. ಸಚಿವ ಜಮೀರ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಖುದ್ದು ಕೆಪಿಸಿಸಿ ಉಪಾಧ್ಯಕ್ಷರೇ ಪತ್ರ ಬರೆದಿದ್ದಾರೆ.
ಜಮೀರ್ ಹೇಳಿಕೆಗಳಿಂದ ಪಕ್ಷ ಹಾಗೂ ಸರ್ಕಾರಕ್ಕೆ ಲಾಭ ಆಗದೆ, ಕೇವಲ ನಷ್ಚ ಆಗ್ತಿದೆ. ಅಮಾನವೀಯ ಹೇಳಿಕೆ ನೀಡುತ್ತಾ, ವಿವಾದ ಹುಟ್ಟು ಹಾಕುತ್ತಾ, ಕೆಟ್ಟ ವಾತಾವರಣ ಸೃಷ್ಟಿಸಿದ್ದಾರೆ ಎಂದು ಜಮೀರ್ ನಡೆ ಬಗ್ಗೆ ಹುಸೇನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಪಚುನಾವಣೆಯಲ್ಲಿನ ಸಚಿವ ಹೇಳಿಕೆ ಪಕ್ಷದ ಮೇಲೆ ದುಷ್ಪರಿಣಾಮ ಬೀರಿದೆ. ರಾಜಕೀಯ ಬೌದ್ದಿಕತೆ ಕಳೆದುಕೊಂಡ ಇಂತಹ ಸಚಿವರನ್ನು ಪಕ್ಷ ಹಾಗೂ ಸರ್ಕಾರ ಮುಖ್ಯ ವಾಹಿನಿಯಲ್ಲಿ ಬಿಂಬಿಸುವುದನ್ನ ಕೈಬಿಟ್ಟರೆ ಕ್ಷೇಮ ಎಂದು ಸಲಹೆ ನೀಡಿದ್ದು, ಬೇಜವಾಬ್ದಾರಿ ಹೇಳಿಕೆ ನೀಡದಂತೆ ಶಿಸ್ತು ಕ್ರಮ ಕೈಗೊಳ್ಳವಂತೆ ಪತ್ರ ಬರೆದಿದ್ದಾರೆ.