ಬೆಂಗಳೂರು:- ನನಗೆ CID ಮೇಲೆ ವಿಶ್ವಾಸ ಹೋಗಿದೆ ಎಂದು CT ರವಿ ಹೇಳಿದ್ದಾರೆ.
WPL ಆರಂಭಕ್ಕೆ ಕ್ಷಣಗಣನೆ: ಆರ್ಸಿಬಿ ಯಾವ ದಿನ ಯಾವ ತಂಡ ಎದುರಿಸಲಿದೆ ಗೊತ್ತಾ!?
ಈ ಸಂಬಂಧ ಮಾತನಾಡಿದ ಅವರು, ನನಗೆ ಸಿಐಡಿ ತನಿಖೆಯಲ್ಲಿ ವಿಶ್ವಾಸ ಇಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ಗೆ ಸಂಬಂಧಿಸಿದಂತೆ ನನಗೆ ಸಿಐಡಿ ನೋಟಿಸ್ ಕೊಟ್ಟಿಲ್ಲ ಎಂದರು.
ಸುವರ್ಣಸೌಧದಲ್ಲಿ ಗಲಾಟೆಗೆ ಸಂಬಂಧಿಸಿದಂತೆ ನೋಟಿಸ್ ಕೊಟ್ಟಿದ್ದರು. ಹೋಗಿ ವಿವರಣೆ ಕೊಟ್ಟು ಬಂದಿದ್ದೇನೆ. ಅಲ್ಲಿಯೇ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡುತ್ತೇವೆ ಎಂದರು. ಅದಕ್ಕೆ ನಾನು ಒಪ್ಪಲಿಲ್ಲ. ಮೊದಲು ಸಿಐಡಿ ತನಿಖಾ ವ್ಯಾಪ್ತಿ ಸ್ಪಷ್ಟಪಡಿಸಿ. ಸಭಾಪತಿ ರೂಲಿಂಗ್ ಕೊಟ್ಟ ಮೇಲೆ ತನಿಖೆ ಮಾಡಲು ಬರುತ್ತಾ ಎಂಬುದನ್ನು ಸ್ಪಷ್ಟಪಡಿಸಿ ಅಂದಿದ್ದೆ ಎಂದರು.
ಇದು ರಾಜಕೀಯ ಒತ್ತಡದಿಂದ ಮಾಡುತ್ತಿರುವುದು ಸ್ಪಷ್ಟ. ನಾನು ಕೊಟ್ಟ ದೂರಿನ ಎಫ್ಐಆರ್ ಆಗಿಲ್ಲ. ಬೇರೆ ತನಿಖೆ ಮಾಡುತ್ತಾರೆ. ನನ್ನ ದೂರಿನ ಎಫ್ಐಆರ್ ಏಕೆ ಮಾಡಿಲ್ಲ? ಇದಕ್ಕೆ ಉತ್ತರ ಕೊಡಲಿ. ಸುಳ್ಳು ಕಥೆ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನನಗೆ ಸಿಐಡಿ ತನಿಖೆ ಮೇಲೆ ವಿಶ್ವಾಸ ಇಲ್ಲ ಎಂದು ಕಿಡಿಕಾರಿದರು.