ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ ಆಗಲಿದೆ.
ಸಿಎಸ್ಕೆ ತನ್ನ ಕೊನೆಯ 2 ಪಂದ್ಯಗಳಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ರುತುರಾಜ್ ಗಾಯಕ್ವಾಡ್ ಪಡೆ ಮತ್ತೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಇತ್ತ ಕೆಕೆಆರ್ ಆಡಿರುವ ಎಲ್ಲಾ 3 ಪಂದ್ಯಗಳನ್ನು ಗೆದ್ದಿದ್ದು ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಫೋರ್ ಹೊಡೆಯಲು ಪ್ರಯತ್ನಿಸಲಿದೆ.
IPL 2024: ಯಶ್ ಗೆ 5 ವಿಕೆಟ್- ಗುಜರಾತ್ ವಿರುದ್ಧ ಲಕ್ನೋಗೆ ಭರ್ಜರಿ ಗೆಲುವು!
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಮುಖಾಮುಖಿ ಅಂಕಿಅಂಶಗಳನ್ನು ನಾವು ನೋಡುವುದಾದರೆ, ಇದರಲ್ಲಿ ಸಿಎಸ್ಕೆ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು ಐಪಿಎಲ್ನಲ್ಲಿ ಇದುವರೆಗೆ 28 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಚೆನ್ನೈ 18 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ 9 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಚೆನ್ನೈ ಮತ್ತು ಕೆಕೆಆರ್ ನಡುವಿನ ಪಂದ್ಯಗಳಲ್ಲಿ, ಚೆನ್ನೈ ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಸಾಧಿಸಿದ್ದರೆ, ಗುರಿಯನ್ನು ಬೆನ್ನಟ್ಟಿದ 10 ಪಂದ್ಯಗಳನ್ನು ಗೆಲುವು ಸಾಧಿಸಿದೆ. ಮತ್ತೊಂದೆಡೆ, ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಿದ ಪಂದ್ಯಗಳಲ್ಲಿ 1 ಬಾರಿ ಮತ್ತು ಚೇಸಿಂಗ್ನಲ್ಲಿ 9 ಪಂದ್ಯಗಳನ್ನು ಗೆದ್ದಿದೆ. ಇನ್ನು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಉಭಯ ತಂಡಗಳು 10 ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ ಸಿಎಸ್ಕೆ 7 ಹಾಗೂ ಕೆಕೆಆರ್ 3 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ, ಚೆನ್ನೈ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಕೋಲ್ಕತ್ತಾ ವಿರುದ್ಧ 3 ಮತ್ತು ಗುರಿಯನ್ನು ಬೆನ್ನಟ್ಟಿದ ವೇಳೆ 3 ಪಂದ್ಯಗಳನ್ನು ಗೆದ್ದಿದೆ. ಚೆಪಾಕ್ನಲ್ಲಿ ಕೋಲ್ಕತ್ತಾ ಚೆನ್ನೈ ವಿರುದ್ಧ ಚೇಸಿಂಗ್ನಲ್ಲಿ 3 ಪಂದ್ಯಗಳನ್ನು ಗೆದ್ದಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಂಕಿಅಂಶಗಳನ್ನು ಗಮನಿಸಿದರೆ, ತಂಡವು ತನ್ನ ತವರು ನೆಲದಲ್ಲಿ 66 ಪಂದ್ಯಗಳನ್ನು ಆಡಿದೆ. ಈ ಪೈಕಿ ಸಿಎಸ್ಕೆ 48ರಲ್ಲಿ ಗೆದ್ದು 18ರಲ್ಲಿ ಸೋತಿದೆ. ತಂಡವು ಮೊದಲು ಬ್ಯಾಟಿಂಗ್ ಮಾಡಿದ 30 ಪಂದ್ಯಗಳಲ್ಲಿ ಮತ್ತು ಚೇಸಿಂಗ್ ಮಾಡುವಾಗ 18 ಪಂದ್ಯಗಳನ್ನು ಗೆದ್ದಿದೆ. ತವರು ನೆಲದಲ್ಲಿ ಚೆನ್ನೈನ ಗರಿಷ್ಠ ಸ್ಕೋರ್ 246 ರನ್ ಮತ್ತು ಕಡಿಮೆ ಸ್ಕೋರ್ 109 ರನ್ ಆಗಿದೆ