ಅಮರಾವತಿ: ಅಣ್ಣ-ತಂಗಿ ನಡುವಿನ ಸಂಬಂಧ ಯಾವತ್ತಿದ್ರೂ ಬಹಳ ವಿಶೇಷವಾಗಿರುತ್ತೆ. ಅಣ್ಣ ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ ಎನ್ನುವ ಹಾಡನ್ನು ಕೇಳಿರಬಹುದು. ಸೋದರ ಸೋದರಿಕೆಯ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ರೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. 1 ಕೋಟಿ ರೂ. ವಿಮೆಗಾಗಿ ತನ್ನ ತಂಗಿಯನ್ನೇ ಕೊಂದು ಅದೊಂದು ಕಾರು ಅಪಘಾತವೆಂದು ಬಿಂಬಿಸಿದ್ದ ಅಣ್ಣ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಮಾ ಪಾವತಿಗಾಗಿ ತನ್ನ ತಂಗಿಯನ್ನು ಕೊಲೆ ಮಾಡಿದ್ದಕ್ಕಾಗಿ ಆಂಧ್ರಪ್ರದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಭಾರೀ ಸಾಲದಿಂದ ಬಳಲುತ್ತಿದ್ದ ಕುಮಾರ್ ಅವರು, ತನ್ನ ಸಹೋದರಿಯ ಜೀವಕ್ಕೆ ಅನೇಕ ವಿಮಾ ಕಂಪನಿಗಳಲ್ಲಿ ವಿಮೆ ಮಾಡಿಸಿದ್ದಾರೆ. ನಂತರ ಆಕೆಯನ್ನು ಯೋಜನೆ ರೂಪಿಸಿ, ಕೊಲೆ ಮಾಡಿದ್ದಾರೆ. ಆದರೆ ನಂತರ ಆ ಕೋಲೆಯನ್ನು ಅಪಘಾತವಾಗಿ ಬಿಂಬಿಸಿ, ತನ್ನ ಯೋಜನೆಯನ್ನು ಯಶ್ಸ್ವಿಯಾಗಿ ಕಾರ್ಯಗತಗೊಳಿಸಿದ್ದಾನೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
Blood in Urine: ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕ್ಯಾನ್ಸರ್ ಲಕ್ಷಣವೇ..? ವೈದ್ಯರ ಸಲಹೆ ಏನೂ..?
ಘಟನೆಯ ದಿನ ಒಂಗೋಲ್ ಆಸ್ಪತ್ರೆಗೆ ಭೇಟಿ ನೀಡುವ ನೆಪದಲ್ಲಿ ಕುಮಾರ್ ತನ್ನ ಸಹೋದರಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದ. ಆದರೆ ವಾಪಸು ಬರುವಾಗ ಆಕೆಗೆ ನಿದ್ರೆ ಮಾತ್ರೆ ಕುಡಿಸಿ ಸಾಯಿಸಿದ್ದಾನೆ. ನಂತರ ಆ್ಯಕ್ಸಿಡೆಂಟ್ ಆಗಿ ಕೊಲೆ ಮಾಡಲು ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ತನಿಖೆಯ ನಂತರ, ಅಧಿಕಾರಿಗಳು ಕುಮಾರ್ ಅವರನ್ನು ಬಂಧಿಸಿ, 120 (ಬಿ) (ಕ್ರಿಮಿನಲ್ ಪಿತೂರಿ), 302 (ಕೊಲೆ), ಮತ್ತು 201 (ಸಾಕ್ಷಾಧಾರಗಳ ಕಣ್ಮರೆಗೆ ಕಾರಣವಾಗುವುದು) ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಇದರೊಂದಿಗೆ ಆತ ಕೃತ್ಯಕ್ಕೆ ಯಾರದರೂ ಸಹಚರರನ್ನು ಹೊಂದಿದ್ದಾನೋ ಅಥವಾ ಈ ಹಿಂದೆ ಇದೇ ರೀತಿಯ ಅಪರಾಧಗಳಿಗೆ ಯತ್ನಿಸಿದ್ದಾನೋ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.