ನವದೆಹಲಿ:- MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್ ಗೆ ಸಂಬಧಪಟ್ಟಂತೆ ಕುಟುಂಬದ ಮೇಲಿನ ಆರೋಪಕ್ಕೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನನಗೆ ಸಹೋದರಿ ಇದ್ದಾರೆ ಎನ್ನುತ್ತಿದ್ದಾರೆ. ನನಗೆ ಯಾರೂ ಸಹೋದರಿಯರು ಇಲ್ಲ. ಗೋಪಾಲ್ ಜೋಷಿ ನಮ್ಮ ಸಹೋದರ ನಾನು ಗೋಪಾಲ್ ಜೋಷಿ ಬೇರೆಯಾಗಿ 35 ವರ್ಷ ಆಗಿದೆ. ನನ್ನ ಹಾಗೂ ಗೋಪಾಲ್ ಜೋಷಿ ಮಧ್ಯೆ ಯಾವುದೆ ವ್ಯವಹಾರ ಇಲ್ಲ. ಯಾರು ಹಣ ಪಡೆದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸ್ಪಷ್ಟಪಡಿಸಿದರು.
ನಿನ್ನೆ ನನ್ನ ಸಹೋದರ ನನ್ನ ಮೇಲೆ ಎಫ್ಐಆರ್ ಆಗಿದ್ದು, ಇಂದು ಕಾಂಗ್ರೆಸ್ ನವರು ಪ್ರತಿಭಟನೆ ಮಾಡಿದ್ದಾರೆ. ನನಗೆ ಸಹೋದರಿ ಇದ್ದಾರೆ ಎನ್ನುತ್ತಿದ್ದಾರೆ. ನನಗೆ ಯಾರೂ ಸಹೋದರಿಯರು ಇಲ್ಲ. ನಾವು ನಾಲ್ಕು ಸಹೋದರರು. ಒಬ್ಬ ಸಹೋದರ ತೀರಿ ಹೋಗಿದ್ದಾರೆ. ಗೋಪಾಲ್ ಜೋಷಿ ನಮ್ಮ ಸಹೋದರ. ನಾನು ಗೋಪಾಲ್ ಜೋಷಿ ಬೇರೆಯಾಗಿ 35 ವರ್ಷ ಆಗಿದೆ. ದುರ್ದೈವದಿಂದ ಅವರ ಮೇಲೆ ಹಿಂದೆಯೂ ಆರೋಪ ಬಂದಿತ್ತು. ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಇಂತಹದ್ದೆ ವಿಚಾರ ಬಂದಿತ್ತು. ನನ್ನ ಸಹೋದರನೊಂದಿಗೆ ನನ್ನ ಹೆಸರು ತಳುಕು ಹಾಕಲಾಗುತ್ತೆ. ನನ್ನ ಸಹೋದರನ ಜೊತೆ ನನ್ನ ಹೆಸರು ತಳುಕು ಹಾಕದಂತೆ ಕೋರ್ಟ್ ನಿಂದ ತಡೆ ತರಲಾಗಿದೆ. ನನ್ನ ಹಾಗೂ ಗೋಪಾಲ್ ಜೋಷಿ ಮಧ್ಯೆ ಯಾವುದೆ ವ್ಯವಹಾರ ಇಲ್ಲ ಎಂದು ಹೇಳಿದರು.
ನನ್ನ ಸಹೋದರನ ಜೊತೆ ವ್ಯವಹಾರ ಅಥವಾ ಅವ್ಯವಾಹಾರ ಇಲ್ಲ. ಸಾಮಾಜಿಕ ಅಥವಾ ಆರ್ಥಿಕವಾಗಿ ಯಾವುದೆ ಸಂಬಂಧ ಇಲ್ಲ. ಕೋರ್ಟ್ ಗೂ ಇದನ್ನೆ ಹೇಳಿದ್ದೇನೆ. 2012ರಲ್ಲೆ ಇದನ್ನು ಜಾಹಿರಾತು ಸಹ ನೀಡಿದ್ದು, ನನ್ನ ಹೆಸರು ತಳುಕು ಹಾಕದಂತೆ ಜಾಹಿರಾತು ನೀಡಲಾಗಲಿದೆ. ವಿಜಯಲಕ್ಷ್ಮಿ ಯಾರು ಎಂದು ನನಗೆ ಗೊತ್ತಿಲ್ಲ. ನಾನು 35 ವರ್ಷದಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ಯಾರಾದ್ರೂ ಫೋಟೊ ತೆಗೆಸಿಕೊಂಡಿದ್ರೆ ನನಗೆ ಗೊತ್ತಿಲ್ಲ. ನನ್ನ ಸಹೋದರ ಜೊತೆ ಕುಟುಂಬ ವ್ಯವಸ್ಥಾಪನ ಪತ್ರ ಮಾಡಿಸಿಕೊಳ್ಳಲಾಗಿದೆ. ನನ್ನ ಹಾಗೂ ಸಹೋದರನ ಜೊತೆ ಯಾವುದೇ ಮಾತುಕತೆ ನಡೆಸುತ್ತಿಲ್ಲಎಂದು ತಿಳಿಸಿದರು.
ದುಡ್ಡು ಕಳೆದುಕೊಂಡಿರುವುದಕ್ಕೆ ವಿಷಾಧವಿದೆ. ನನ್ನ ಬಂಧಿಸಬೇಕು ಎನ್ನುವುದು ಹಾಸ್ಯಾಸ್ಪದ. ಯಾರು ಹಣ ಪಡೆದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಕಲ್ಲಿದ್ದಲು ಸಚಿವನಾಗಿ ಕೆಲಸ ಮಾಡಿದ್ದೇನೆ. ಬೇರೆ ಸಚಿವರು ಕಲ್ಲಿದ್ದಲು ಮಸಿ ಹತ್ತಿಸಿಕೊಂಡು ಹೋಗಿದ್ದಾರೆ. ನಾನು ಆ ರೀತಿಯ ಯಾವುದೇ ಕೆಲಸ ಮಾಡಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.