ಸಿರುಗುಪ್ಪ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಶೌಚಾಲಯ ಕಟ್ಟಡದ ಹಿಂದಿರುವ ಕೇವಲ ಒಂದು ಅಡಿ ಅಗಲದ ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಯು ಮೊಸಳೆ ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ,
ಹೌಹಾರಿ ಓಡಿ ಬಂದಿದ್ದಾನೆ. ಬಳಿಕ ಜನರು ಮೊಸಳೆಯನ್ನು ನೋಡಲು ಮತ್ತು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಲು ಮುಗಿಬಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಹಿಡಿಯುವ ಕಾರ್ಯಾಚರಣೆ ನಡೆಸಿದರು.