ಆನೇಕಲ್:- ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಆಗಿರುವ ಘಟನೆ ಜಿಗಣಿ ಕೆರೆಯಲ್ಲಿ ಸಂಭವಿಸಿದೆ.
ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ್ರಾ ದೀಪಿಕಾ ಪಡುಕೋಣೆ: ಹೇಗಿದ್ದಾಳೆ ಗೊತ್ತಾ ಮುದ್ದು ದುವಾ
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಕೆರೆಯಲ್ಲಿ ಮರದ ಮೇಲಿದ್ದ ಮೊಸಳೆ ನೆಲಕ್ಕುರುಳಿದಿದೆ. ಕೆರೆಯ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಹಸು ಮೇಯಿಸುವವರ ಕಣ್ಣಿಗೆ ಮೊಸಳೆ ಬಿದ್ದಿದ್ದು, ಮೊಸಳೆಯನ್ನ ಕಂಡು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿಯಲಾಗಿದೆ.
ಜಾನುವಾರುಗಳನ್ನ ಮೇಯಿಸಲು ಜಿಗಣಿ ಕೆರೆ ಸಮೀಪ ಗ್ರಾಮಸ್ಥರು ಬರುತ್ತಿದ್ದರು. ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಇಂದು ಅರಣ್ಯ ಅಧಿಕಾರಿಗಳ ತಂಡ ಭೇಟಿ ಸಾಧ್ಯತೆ ಇದೆ.