ನವದೆಹಲಿ: ನಾಯಿ ಬಿಸ್ಕೆಟ್ (Dog Biscuit) ವಿಚಾರವಾಗಿ ತಮ್ಮ ವಿರುದ್ಧ ಟೀಕೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕಿಡಿಕಾರಿದ್ದಾರೆ
ನಾಯಿ ಬಿಸ್ಕೆಟ್ ಕುರಿತು ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, ನಾಯಿಗೆ ನಾನು ಬಿಸ್ಕೆಟ್ ತಿನ್ನಿಸಲು ಪ್ರಯತ್ನಿಸಿದೆ. ಆದರೆ ಅದು ಸ್ವೀಕರಿಸಲಿಲ್ಲ, ನಡುಗುತ್ತಿತ್ತು. ಹೀಗಾಗಿ ಅದರ ಮಾಲೀಕರಿಗೆ ನಾನು ಬಿಸ್ಕೆಟ್ ನೀಡಿದೆ. ಮಾಲೀಕನ ಕೈ ಸೇರುತ್ತಿದ್ದಂತೆ ನಾಯಿ ಬಿಸ್ಕೆಟ್ಗಳನ್ನು ತಿಂದಿತು. ಅದರಲ್ಲಿ ಏನು ಸಮಸ್ಯೆ ಇದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ನಾಯಿ ತಿರಸ್ಕರಿಸಿದ ಬಿಸ್ಕೆಟ್ ಅನ್ನು ರಾಹುಲ್ ಗಾಂಧಿ ವ್ಯಕ್ತಿಯೊಬ್ಬರಿಗೆ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಟೀಕೆ ಕೂಡ ವ್ಯಕ್ತವಾಗಿತ್ತು. ರಾಹುಲ್ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಈ ರೀತಿ ನಡೆಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು
ಭಾರತ್ ಜೋಡೊ ನ್ಯಾಯ ಯಾತ್ರಾ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಾಹುಲ್ ಗಾಂಧಿ, ನಾಯಿಗೆ ಬಿಸ್ಕೆಟ್ ನೀಡಿದ್ದಾರೆ. ಆದರೆ ನಾಯಿ ಅದನ್ನು ತಿನ್ನಲು ನಿರಾಕರಿಸಿದೆ. ನಂತರ ಅದರ ಮಾಲೀಕನಿಗೆ ಬಿಸ್ಕೆಟ್ನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.