ಬೆಂಗಳೂರು:- ಸೋಲದೇವನಹಳ್ಳಿ ಜಯರಾಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಹಾಪೂರ ಅರಣ್ಯ ಪ್ರದೇಶದಲ್ಲಿ ಬೆಂಕಿ ; ಅಪಾರ ಪ್ರಮಾಣದ ಸಸ್ಯಸಂಪತ್ತು ನಾಶ
ಮುನಿರಾಜು @ ಮುನಿ,ರಾಜೇಶ್ @ ಬಬ್ಲು, ಯತೀಶ್ ಗೌಡ, ವಿನಯ್ ,ಉದಯ್ ಸೇರಿ ಐವರು ಬಂಧಿತರು. ಹಳೆ ದ್ವೇಷ ಹಿನ್ನಲೆ ಆರೋಪಿಗಳು, ಜಯರಾಂ ನನ್ನ ಕೊಲೆ ಮಾಡಿದ್ದರು. 2016 ರಲ್ಲಿ ಮನೋಜ್ ಸಹೋದರ ಕಿರಣ್ ಎಂಬಾತನನ್ನು ಜಯರಾಮ್ ಕೊಲೆ ಮಾಡಿದ್ದ. ಯುವತಿ ವಿಚಾರಕ್ಕೆ ಗಲಾಟೆ ಮಾಡಿ ಕೊಲೆ ಮಾಡಿದ್ದ.
ಸದ್ಯ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋಜ್ ಇದ್ದು, 2023 ರಲ್ಲಿ ಮನೋಜ್ ನನ್ನ ಗೂಂಡಾ ಕಾಯ್ದೆಯಲ್ಲಿ ಬಂಧಿಸಿ ಸಿಸಿಬಿ ಪೊಲೀಸರು, ಜೈಲಿಗಟ್ಟಿದ್ದರು.
ಅಲ್ಲದೇ ಜೈಲಿನಲ್ಲಿದ್ದುಕೊಂಡೆ ಜಯರಾಮ್ ಕೊಲೆಗೆ ಸಂಚು ರೂಪಿಸಲಾಗಿತ್ತು. ಮುನಿರಾಜು ಮತ್ತು ರಾಜೇಶ್ ಜೊತೆ ಮನೋಜ್ ಸಂಪರ್ಕದಲ್ಲಿದ್ದ. ಉದಯ್ ಜಯರಾಮ್ ಮೂವ್ಮೆಂಟ್ ವಾಚ್ ಮಾಡಿದ್ದ. ಬಾರ್ ಒಳಗೆ ಜಯರಾಮ್ ಬರ್ತಿದ್ದಂತೆ ಮಾರಕಾಸ್ರ್ತಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಾರ್ಚ್ 4 ರಂದು ರಾತ್ರಿ ವೇಳೆ ಜಯರಾಮ್ ಕೊಲೆಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ.