ಆನೇಕಲ್:- ಬೆಂಗಳೂರು ಹೊರವಲಯದ ಸೂರ್ಯಸಿಟಿ ಸಮೀಪದ ಹಳೆ ಚಂದಾಪುರ ಬಳಿ ಮಗನೋರ್ವ ಹೆತ್ತ ತಾಯಿ ಕೊಂದು ಬಳಿಕ ತಾನೂ ಕೂಡ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ಮದುವೆ ಸಂದರ್ಭವನ್ನ ಸಾರ್ಥಕಗೊಳಿಸಿ ಮಾದರಿಯಾದ ನಟ ಡಾಲಿ: ಓದದೇ ಇದ್ದರೂ ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಧನಂಜಯ!
ಮಹಾಲಕ್ಷ್ಮಿ, ರಮೇಶ್ ಸೂಸೈಡ್ ಮಾಡಿಕೊಂಡವರು. ಮೃತರು ಚಿತ್ರದುರ್ಗ ಮೂಲದ ಚಳ್ಳಕೆರೆ ಮೂಲದವರು. ಮೃತರ ಕುಟುಂಬ ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಆದರೆ ಮಗ ಕುಡಿತದ ದಾಸನಾಗಿದ್ದ. ಇದೇ ವಿಚಾರವಾಗಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.
ನಿನ್ನೇ ರಾತ್ರಿಯೂ ಕುಡಿದು ಬಂದು ತಾಯಿ ಮಹಾಲಕ್ಷ್ಮಿ ಜೊತೆ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಮೊಬೈಲ್ ಚಾರ್ಜಿಂಗ್ ವೈರ್ ನಿಂದ ತಾಯಿಯ ಕತ್ತಿಗೆ ಬಿಗಿದು ಕೊಲೆಗೈದಿದ್ದಾನೆ. ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.