ಬೆಂಗಳೂರು:- ಮನೆಯಿಂದ ಹೊರ ಹೋದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೀಲಲಿಗೆ ಗ್ರಾಮದಲ್ಲಿ ಜರುಗಿದೆ.
ಯಾಸಿನ್ 26 ಮೃತ ಯುವಕ. ನಿರ್ಜನ ಪ್ರದೇಶದ ಬಾತ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಖಾಸಗಿ ಶಾಲೆಯಲ್ಲಿ ಚಾಲಕನಾಗಿ ಯಾಸಿನ್ ಕೆಲಸ ಮಾಡುತ್ತಿದ್ದ. ನೆನ್ನೆ ಮಕ್ಕಳಿಗೆ ತಿಂಡಿ ತರಲು ಹೊರ ಹೋಗಿದ್ದ. ಆದರೆ ಏನಾಯಿತೋ ಏನೋ ಹಿಲಲಿಗೆ ಗ್ರಾಮದ ಯಲ್ಲಮ್ಮ ದೇವಾಲಯದ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಜಗದೀಶ್ ಎಂಬುವವರಿಗೆ ಸೇರಿದ ಸ್ಥಳದ ನಿರ್ಮಾಣ ಹಂತದ ಬಾತ್ ರೂಮ್ ನಲ್ಲಿ ಶವಪತ್ತೆಯಾಗಿದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.