ಗೋಕಾಕ: ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಪಕ್ಕದಲ್ಲಿರುವ ವಾಲ್ಮೀಕಿ ಮೈದಾನದಲ್ಲಿ ಮೂವರು ವಿದ್ಯಾರ್ಥಿಗಳಿಂದ ಒರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ನಡೆದಿದೆ
ಸಂಜೆ ಶಾಲೆ ಬಿಟ್ಟ ನಂತರ 10 ನೇಯ ತರಗತಿಯಲ್ಲಿ ಒದುತಿದ್ದ ಪ್ರದೀಪ ಬಂಡಿವಡ್ಡರ ಇತನಿಗೆ ಅದೆ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಒದುತಿದ್ದ ಸಹಪಾಠಿಗಳಾದ ರವಿ ಚಿನ್ನವ, ಅಶೋಕ ಕಂಕಣವಾಡಿ,ಸಿದ್ದಾರ್ಥ ಮತ್ತಿಕೊಪ್ಪ ಇವರೆಲ್ಲರೂ ಸೇರಿ ಪ್ರದೀಪ ಬಂಡಿವಡ್ಡರ ಇತನಿಗೆ ತಮ್ಮ ಬ್ಯಾಗ ತರಲು ಹೇಳಿದ್ದರು,ಆಗ ಆತ ಬ್ಯಾಗ ತರಲು ನಿರಾಕರಿಸಿದ್ದಕ್ಕೆ ಆಕ್ರೊಶಗೊಂಡು ಮೂವರು ಸೇರಿ ಕುತ್ತಿಗೆ,ಕೈಗೆ, ಮತ್ತು ಹೊಟ್ಟೆಗೆ ಮನಸೋ ಇಚ್ಚೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ,
ರಕ್ತ ಸ್ರಾವದಿಂದ ಸ್ಥಳದಲ್ಲಿ ಬಿದ್ದು ನರಳಾಡುತಿದ್ದ ಗಾಯಾಳು ಪ್ರದೀಪ ಬಂಡಿವಡ್ಡರ ಇತನನ್ನು ಸ್ಥಳಿಯ ಶಿಕ್ಷಕರು ಚಿಕಿತ್ಸೆಗಾಗಿ ಗೋಕಾಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು,ನಂತರ ಹೆಚ್ವಿನ ಚಿಕಿತ್ಸೆಗಾಗಿ ನಗರದ ಖಾಸಗಿ ಗಂಗಾ ಆಸ್ಪತ್ರೆಗೆ ಗಾಯಾಳುವನ್ನು ದಾಖಲಿಸಿದ್ದಾರೆ, ಸುದ್ದಿ ತಿಳಿದ ನಗರ ಪೋಲಿಸ ಸಿಬ್ಬಂದಿಗಳು ಆಸ್ಪತ್ರೆಗೆ ದೌಡಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ, ಇನ್ನು ಆರೋಪಿಗಳು ಮತ್ತು ಗಾಯಾಳು ಒಂದೆ ಶಾಲೆಯಲ್ಲಿ 10 ನೇಯ ತರಗತಿಯಲ್ಲಿ ಒದುತಿದ್ದರೆಂದು ತೀಳಿದು ಬಂದಿದೆ.
ಇನ್ನು ಆರೋಪಿಗಳ ಪತ್ತೆ ಹಚ್ವಲು ಪೋಲಿಸರು ಬಲೆ ಬಿಸಿದ್ದು, ಗೋಕಾಕ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡಿದ್ದರು. ಇನ್ನು ಪಾಲಕರ ಅಕ್ರಂದನ ಮುಗಿಲು ಮುಟ್ಟಿದೆ,