ಮುಂಬೈ: ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಹೃದಯ ಸ್ತಂಭನದಿಂದ ಕ್ರಿಕೆಟಿಗ ಕುಸಿದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕ್ರಿಕೆಟಿಗ ಇಮ್ರಾನ್ ಪಟೇಲ್ ಮೃತ ಆಟಗಾರ. ಆರಂಭಿಕರಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಪಿಚ್ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಎದೆ ಮತ್ತು ತೋಳಿನ ನೋವಿನ ಬಗ್ಗೆ ಹೇಳಿಕೊಂಡರು. ಅಂಪೈರ್ಗಳು ಮೈದಾನದಿಂದ ಹೊರಹೋಗಲು ಅನುಮತಿ ನೀಡಿದರು. ಆದರೆ, ಪೆವಿಲಿಯನ್ಗೆ ಹಿಂತಿರುಗುವಾಗ ಇಮ್ರಾನ್ ಕುಸಿದು ಬಿದ್ದರು.
ನೇರಪ್ರಸಾರವಾಗುತ್ತಿದ್ದ ಪಂದ್ಯಾವಳಿಯ ಇಡೀ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಮ್ರಾನ್ ಕುಸಿದು ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಇತರ ಆಟಗಾರರು ಅವರತ್ತ ಧಾವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಪರೀಕ್ಷಿಸಿದ ಬಳಿಕ ಇಮ್ರಾನ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಅಂಚೆ ಕಚೇರಿಯಲ್ಲಿ “ಪ್ರೀಮಿಯಂ ಉಳಿತಾಯ ಖಾತೆ” ತೆರೆಯುವುದು ಹೇಗೆ.? ಪ್ರಯೋಜನಗಳೇನು.? ಇಲ್ಲಿದೆ ಮಾಹಿತಿ
ಇಮ್ರಾನ್ ಅವರು ತುಂಬಾ ಆರೋಗ್ಯವಾಗಿದ್ದರು. ದೈಹಿಕವಾಗಿ ಸದೃಢರಾಗಿದ್ದರು. ಆದರೆ ಹೃದಯ ಸ್ತಂಭನದಿಂದ ಮೃತಪಟ್ಟಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಮ್ರಾನ್ಗೆ ಪತ್ನಿ ಮತ್ತು ಮೂವರು ಪುತ್ರಿಯರಿದ್ದು, ಅವರಲ್ಲಿ ಕಿರಿಯ ಮಗುವಿಗೆ ಕೇವಲ ನಾಲ್ಕು ತಿಂಗಳು. ಪಟೇಲ್ ಅವರು ಕ್ರಿಕೆಟ್ ತಂಡದ ಮಾಲೀಕರಾಗಿದ್ದರು. ಅವರು ಈವರೆಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಹಿನ್ನೆಲೆ ಹೊಂದಿದವರಲ್ಲ. ಅವರು ಉತ್ತಮ ದೈಹಿಕ ಸ್ಥಿತಿಯಲ್ಲಿದ್ದರು ಎಂದು ಪಂದ್ಯದ ಮತ್ತೊಬ್ಬ ಆಟಗಾರ ನಾಸೀರ್ ಖಾನ್ ತಿಳಿಸಿದ್ದಾರೆ.