ಮುಂಬೈ:- ಕ್ರಿಕೆಟಿಗ ಚಾಹಲ್, ಧನಶ್ರೀ ವರ್ಮಾಗೆ ವಿಚ್ಛೇದನ ಮಂಜೂರಾಗಿದ್ದು, ಮಾಜಿ ಪತ್ನಿಗೆ 4.75 ಕೋಟಿ ಜೀವನಾಂಶ ಕೊಡಲು ಚಾಹಲ್ ಒಪ್ಪಿಗೆ ಕೊಟ್ಟಿದ್ದಾರೆ.
ಕ್ಷೀರಭಾಗ್ಯ ಯೋಜನೆಯ ಹಾಲಿನ ಪ್ಯಾಕೆಟ್ ಅಕ್ರಮ ಸಾಗಾಟ: ಇಬ್ಬರು ಅರೆಸ್ಟ್
ಇಬ್ಬರೂ ಗುರುವಾರ ಬಾಂದ್ರಾ ಕೌಟುಂಬಿಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ವೇಳೆ ಅರ್ಜಿ ಪುರಸ್ಕರಿಸಿದ ಕೋರ್ಟ್ ವಿಚ್ಛೇದನ ಮಂಜೂರು ಮಾಡಿ ತೀರ್ಪು ಪ್ರಕಟಿಸಿದೆ ಎಂದು ಚಾಹಲ್ ಪರ ವಕೀಲ ನಿತಿನ್ ಗುಪ್ತಾ ತಿಳಿಸಿದ್ದಾರೆ.
ಚಾಹಲ್ ಮತ್ತು ಧನಶ್ರೀ 2020ರ ಡಿಸೆಂಬರ್ನಲ್ಲಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2022ರ ಜೂನ್ನಿಂದಲೇ ಅವರು ಬೇರ್ಪಟ್ಟಿದ್ದರು. ಈ ವರ್ಷದ ಫೆ.5ರಂದು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಇದೇ ಮಾ.22ರಿಂದ ಚಾಹಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುತ್ತಿರುವ ಕಾರಣದಿಂದಾಗಿ ಗುರುವಾರದ ಒಳಗೆ ಅರ್ಜಿ ವಿಚಾರಣೆ ಮುಗಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಅದಂತೆ ಇಂದು ವಿಚ್ಛೇದನ ಅಂತಿಮಗೊಳಿಸಲಾಗಿದೆ