ಬೆಂಗಳೂರು:- ರಾಜ್ಯದಲ್ಲಿ ಕೊರೋನಾ ಭೀತಿ ದಿನೇ ದಿನೇ ಹೆಚ್ಚಾಗ್ತಿದ್ದು, ರಾಜ್ಯದಲ್ಲಿ ಒಟ್ಟು 1159 ಸಕ್ರಿಯ ಕೊವಿಡ್ ಪ್ರಕರಣ ದಾಖಲಾಗಿದೆ.
ನಿನ್ನೆ ಒಂದೇ ದಿನ 328 ಪಾಸಿಟಿವ್ ಕೇಸ್ ಇದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 4.55% ಕೊವಿಡ್ ಪಾಸಿಟಿವ್ ರೇಟ್ ವರದಿ ಆಗಿದೆ. ಕಳೆದ 24 ಗಂಟೆಯಲ್ಲಿ 7205 ಟೆಸ್ಟ್ಗಳನ್ನು ಮಾಡಲಾಗಿದ್ದು, 6418 RTCPR ಹಾಗೂ 787 RAT ಟೆಸ್ಟ್ಗಳನ್ನ ಮಾಡಲಾಗಿದೆ.
ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ ಆಗಿದೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೂ 628 ಕೇಸ್ಗಳು ವರದಿ ಆಗಿದ್ದು, ಒಟ್ಟು 1159 ಸಕ್ರಿಯ ಪ್ರಕರಣಗಳಲ್ಲಿ 1087 ಕೇಸ್ಗಳು ಹೋಮ್ಐಸೋಲೇಷನ್ನಲ್ಲಿ ಇರಲು ಸೂಚನೆ ನೀಡಿದ್ದಾರೆ.
72 ಕೇಸ್ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅದರಲ್ಲಿ ಐಸಿಯು ನಲ್ಲಿ 9ಕೇಸ್ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 3 ಕೇಸ್ಗಳಿಗೆ ಐಸಿಯು ವೆಂಟೀಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.