ವಿಜಯಪುರ: ರಾಜ್ಯದಲ್ಲಿಯೂ ಕೋವಿಡ್ ಉಪತಳಿ ಜೆಎನ್.1 ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗುವದು ಎಂದು ವಿಜಯಪುರ ಡಿಸಿ ಟಿ.ಭೂಬಾಲನ ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿ, ಕೋವಿಡ್ -19 ನ ರೂಪಾಂತರಿ ಜೆ ಎನ್ 1 ವೈರಸ್ ಆತಂಕ ಶುರುವಾಗಿದೆ. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಆತಂಕ ಇಲ್ಲ ಪಕ್ಕದ ರಾಜ್ಯ ಕೇರಳ ಹಾಗೂ ತಮಿಳುನಾಡಿನಲ್ಲಿ ಸ್ವಲ್ಪ ಆತಂಕ ಇರುವ ಕಾರಣ. ಈಗಾಗಲೇ ನಮಗೆ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಬಂದಿದೆ.
ಜೆ ಎನ್ 1 ಇದು ಓಮಿಕ್ರಾನ್ ನ ಸಬ್ ವೇರಿಯಂಟ್ ಆಗಿದೆ ಕೋವಿಡ್ ನ ಲಕ್ಷಣಗಳೇ ಇದರಲ್ಲೂ ಇದೆ.ಕರ್ನಾಟಕದಲ್ಲಿ 70 ಕೋವಿಡ್ ಕೇಸ್ ಇದೆ ಕೇರಳದಲ್ಲಿ ಸುಮಾರು 2 ಸಾವಿರ ಕೇಸುಗಳಿವೆ ನಾವು ಗಾಬರಿ ಪಡುವ ಅವಶ್ಯಕತೆ ಇಲ್ಲ.
60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ವಿವಿಧ ರೋಗದಿಂದ ಬಳಲುತ್ತಿರುವವರು ಮಾಸ್ಕ ಧರಿಸಲೇ ಬೇಕು. ಗಾಬರಿ ಪಡುವ ಅವಶ್ಯಕತೆ ಇಲ್ಲ, ಆದರೂ ಮುಂಜಾಗೃತೆ ವಹಿಸಬೇಕಿದೆ ಜನರು ಗಾಬರಿಯಾಗಬಾರದು,
ಮಹಾರಾಷ್ಟ್ರದಲ್ಲಿ 12 ಮಾತ್ರ ಇದೆ, ಗೋವಾದಲ್ಲೂ 22 ಪ್ರಕರಣಗಳು ಇವೆ ನಮ್ಮ ರಾಜ್ಯಕ್ಕಿಂತ ಅಲ್ಲಿ ಕಡಿಮೆ ಪ್ರಕರಣಗಳು ಇವೆ ಆದರೂ ಸಹಿತ ಮುಂಜಾಗೃತಾ ಕ್ರಮ ಕೈಗೊಂಡು ಗಡಿಯಲ್ಲಿ ಕಟ್ಟೆಚ್ಚರ ಕೈಗೊಳ್ಳುತ್ತೇವೆ ಎಂದರು.