ಬೆಂಗಳೂರಿಗರೇ ಪಾಲಿಕೆಯ ಮತ್ತಷ್ಟು ಕೋವಿಡ್ ನಿರ್ಬಂಧಗಳನ್ನ ಎದುರಿಸಲು ಸಿದ್ಧರಾಗಿ. ಯಾಕಂದ್ರೆ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚಳವಾಗುವ ಭೀತಿ ಹಿನ್ನೆಲೆ ಕೋವಿಡ್ ಕಟ್ಟಿಹಾಕಲು ಬಿಬಿಎಂಪಿ ಮತ್ತೊಂದು ಪ್ಲಾನ್ ರೂಪಿಸಿದೆ. ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲು ಸಿದ್ಧತೆ ಕೂಡ ನಡೆಸಿದೆ. ಬೆಂಗಳೂರಿಗಾಗಿಯೇ ಸಿದ್ಧವಾಗ್ತಿರೊ ಪ್ರತ್ಯೇಕ ಗೈಡ್ಲೈನ್ಸ್ನಲ್ಲಿ ಏನೆಲ್ಲಾ ನಿರ್ಬಂಧಗಳ ಹೇರಿಕೆಯಾಗಲಿದೆ ಅನ್ನೋದ್ರ ಡಿಟೇಲ್ಸ್ ಇಲ್ಲಿದೆ…
ಕೊರೊನಾ ದೇಶ ಬಿಟ್ಟು ತೊಲಗುವ ಯಾವ ಲಕ್ಷಣ ಕಾಣ್ತಿಲ್ಲ.ಅಲೆಗಳ ಮೇಲೆ ಅಲೆಗಾಗಿ ಬಂದು ಜನರನ್ನು ಹಿಂಡಿ ಹಿಪ್ಪೆ ಮಾಡ್ತಿದೆ.ಈಗಾಗಲೇ ಮೊದಲೆರಡು ಅಲೆಯಿಂದ ಬೆಂದುಹೋಗಿರೋ ಜನಕ್ಕೆ ಇದೀಗ ಹೊಸ ರೂಪಾಂತದಲ್ಲಿ ಬಂದಿರೋ ಕೊರೊನಾ ಕ್ರಿಮಿ ಮತ್ಗೆ ಆತಂಕ ಹುಟ್ಟಿಸಿದೆ.ಈಗಾಗಲೇ ಕೇರಳದಲ್ಲಿ ಸಾವಿನ ಕೇಕ್ ಹಾಕ್ತಿರೋ ಕೊರೊನಾ ಮಾಹಾಮರಿ ರಾಜ್ಯಕ್ಕೂ ಕಾಲಿಟ್ಟು ಬೆಂಗಳೂರು ನಗರದಲ್ಲಿ ಒಬ್ಬರನ್ನು ಬಲಿ ಕೂಡ ಪಡಿದದೆ.ಈ ಕ್ರೂರಿಯ ಅಟ್ಟಹಾಸಕ್ಕೆ ಎದುರಿ ಹೋಗಿರೋ ಬಿಬಿಎಂಪಿ ಆರಂಭದಲ್ಲಿ ಕೊರೊನಾ ಕಟ್ಟಿಹಾಕೋಕ್ಕೆ ಮುಂದಾಗಿದೆ.
ಹೌದು..ಬೆಂಗಳೂರು ನಗರದಲ್ಲಿ ಮಹಾಮಾರಿ ಕೊರೊನೊ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಮುನ್ಸೂಚನೆ ಸಿಕ್ಕಿದೆ. ಇದು ಬಿಬಿಎಂಪಿಗೆ ಆತಂಕ ಹುಟ್ಟಿಸಿದೆ. ಕೊರೊನಾ ರೂಪಾಂತರಿ JN.1 ಗೆ ಸೋಂಕಿತನೊಬ್ಬ ಸಾವನ್ನಪ್ಪಿರೋದು ಪಾಲಿಕೆಗೆ ನಿದ್ದೆಗಡಿಸಿದೆ. ಕೂಡಲೇ ಅಲರ್ಟ್ ಆಗಿರೋ ಮಹಾನಗರ ಪಾಲಿಕೆ ಅಧಿಕಾರಿಗಳು ಇವತ್ತು ಸಭೆ ನಡೆಸಿದ್ದಾರೆ. ಪಾಲಿಕೆ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಹಾಗಾದ್ರೆ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯಿತು ಅಂತ ನೋಡೋದಾದ್ರೆ.
ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಜಾರಿಯಾದ್ರೆ ಏನೆಲ್ಲಾ ನಿರ್ಬಂಧಗಳು ಇರಲಿವೆ..!?
-ಬೆಂಗಳೂರಿನಲ್ಲಿ ಪ್ರತಿ ನಿತ್ಯ ಟೆಸ್ಟಿಂಗ್ ಮಾಡೋಕೆ ಪ್ಲಾನ್..
-ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣ, ಹಾಗೂ ಸಾರ್ವಜನಿಕ ಸ್ಥಳಗಲ್ಲಿ ಕೋವಿಡ್ ಟೆಸ್ಟಿಂಗ್
,- ಕೇರಳದಲ್ಲಿ ಸೋಂಕು ಹೆಚ್ಚಾದ ಕಾರಣ ಕೇರಳ ಪ್ರಯಾಣಿಕರಿಗೆ ವಿಶೇಷ ಕೋವಿಡ್ ತಪಾಸಣೆ
– ಗಡಿ ಬಾಗದಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ನಿರ್ಧಾರ
-ನ್ಯೂ ಇಯರ್ ಹಾಗೂ ಕ್ರಿಸ್ಮಸ್ ವೇಳೆ ಜನದಟ್ಟಣೆ ನಿಯಂತ್ರಿಸಲು ಕ್ರಮ
– ಸಭೆ, ಸಮಾರಂಭ, ಪ್ರತಿಭಟನೆ , ರ್ಯಾಲಿಗಳ ಮೇಲೆ ಪಾಲಿಕೆ ಕಣ್ಣು
– ಧಾರ್ಮಿಕ ಕಾರ್ಯಕ್ರಮ, ಜಾತ್ರೆ ಮಹೋತ್ಸವಗಳಿಗೆ ರೂಲ್ಸ್
– ಮದುವೆ ಸಮಾರಂಭಗಳಗಲ್ಲಿ ಮಾರ್ಷಲ್ ನೇಮಕ
– ಹೋಟೆಲ್, ಬಾರ್ , ರೆಸ್ಟೋರೆಂಟ್ ಗಳ ಮೇಲೆ ಹದ್ದಿನ ಕಣ್ಣು
– ಇನ್ ಡೋರ್ ಗೇಮ್ಸ್, ಸ್ಮಿಮಿಂಗ್ ಪೂಲ್, ಜಿಮ್ ಗಳಿಗೆ ತಪಾಸಣೆ
– ಸಾರ್ವಜನಿಕ ಪಾರ್ಕ್, ಆಟದ ಮೈದಾನಗಳ ಮಾರ್ಷಲ್ ನೇಮಕ
ಮುಂದಿನ ವಾರದಲ್ಲಿ ಕೊರೊನಾ ಕೇಸ್ ಗಳು ದಾಖಲಾಗುವ ಸಾಧ್ಯತೆ ಇದೆ ಅಂತಾ ತಜ್ಞರು ಸಹ ಎಚ್ಚರಿಸಿದ್ದಾರೆ. ಹೀಗಾಗಿ ಕೊರೊನಾ ಹಾಟ್ಸ್ಪಾಟ್ ಆಗದಂತೆ ನೋಡಿಕೊಳ್ಳಲು ಬೆಂಗಳೂರು ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರತರಲು ಬಿಬಿಎಂಪಿ ತಯಾರಿ ನಡೆಸಿದೆ. ಈ ಬಗ್ಗೆ ಚರ್ಚೆ ಮಾಡಿರೋ ಅಧಿಕಾರಿಗಳು ನಗರದಲ್ಲಿ ಕೋವಿಡ್ ಪರಿಸ್ಥಿತಿ ಆಧಾರಿಸಿ ಪ್ರತ್ಯೇಕ ಗೈಡ್ಲೈನ್ಸ್ಗೆ ತಯಾರಿ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಕೋವಿಡ್ ಟೆಸ್ಟ್ ಗಳನ್ನ ಹೆಚ್ಚೆಚ್ಚು ನಡೆಸಿ ಆರಂಭದಲ್ಲೇ ಸೋಂಕನ್ನ ನಿಯಂತ್ರಿಸಲು ಪಾಲಿಕೆ ಮುಂದಾಗಿದೆ.
ಬೈಟ್: ರೆಡ್ಡಿ ಶಂಕರ್ ಬಾಬು, ಬಿಬಿಎಂಪಿ ವಿಶೇಷ ಆಯುಕ್ತ ಆರೋಗ್ಯ
ಜೆಎನ್.1 ತಳಿ ಆತಂಕದ ಬೆನ್ನಲ್ಲೇ ಪ್ರತಿದಿನ ಸುಮಾರು 500- ರಿಂದ 1 ಸಾವಿರ ಜನರಿಗೆ ಕೋವಿಡ್ ಟೆಸ್ಟಿಂಗ್ ಮಾಡಲು ಪಾಲಿಕೆ ನಿರ್ಧಾರ ಮಾಡಿದೆ.. SARI ಲಕ್ಷಣ ಕಂಡು ಬಂದ್ರೆ ಆರ್ಟಿಪಿಸಿಆರ್ ಟೆಸ್ಟ್ ಸಹ ಕಡ್ಡಾಯಗೊಳಿಸಲಿದೆ.. ಹೆಲ್ತ್ ವರ್ಕರ್ಸ್ ಕಡ್ಡಾಯವಾಗಿ ಮಾಸ್ಕ್ ಹಾಕಬೇಕು. ಇನ್ನುಳಿದಂತೆ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜನರು ಕೂಡ ಮಾಸ್ಕ್ ಧರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಒಟ್ಟಾರೆ ಕೇರಳದಲ್ಲಿ ಮಹಾಮಾರಿ ಕೊರೊನಾದ ಉಪತಳಿ ಜೆಎನ್.1 ಪತ್ತೆಯಾಗ್ತಿದ್ದಂತೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅಲರ್ಟ್ ಘೋಷಿಸಲಾಗಿದೆ. ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಜನರು ಕೂಡ ಕೊರೊನಾ ನಿಯಮಗಳನ್ನು ಪಾಲಿಸಬೇಕಿದೆ.ಇಲ್ಲದ್ರೆ ಹಳೆ ದಿನಗಳು ಮತ್ತೆ ಮರುಕಳಿಸಲಿವೆ.