ಮುಂಬೈ : ಷೇರು ಮಾರುಕಟ್ಟೆ ವಂಚನೆ ಆರೋಪ ಸಂಬಂಧ ಮಾಜಿ ಸೆಬಿ ಮುಖ್ಯಸ್ಥೆ ಮಾಧಬಿ ಪುರಿ ಬುಚ್ ಹಾಗೂ ಇತರ ಕೆಲವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈ ಕೋರ್ಟ್ ಆದೇಶ ನೀಡಿದೆ. ಮುಂಬೈ ಅಧ್ಯಕ್ಷ ಮಾಧಬಿ ಪುರಿ ಹಾಗೂ ಇತರ ಐದು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಸುವಂತೆ ಭ್ರಷ್ಟಾಷಾರ ನಿಗ್ರಹ ದಳಕ್ಕೆ ಕೋರ್ಟ್ ಆದೇಶ ನೀಡಿದೆ. ಆದರೆ ಈ ಮುಂಬೈ ಕೋರ್ಟ್ನ ಆದೇಶ ಪ್ರಶ್ನಿಸಲು ಸೆಬಿ ಮುಂದಾಗಿದೆ.
ಕಾಂಗ್ರೆಸ್ನ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣ ; ಓರ್ವನ ಬಂಧನ
ಪತ್ರಕರ್ತರೊಬ್ಬರು ಎಂಬುವರು ಷೇರು ಮಾರುಕಟ್ಟೆ ವಂಚನೆ ಸಂಬಂಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿದೆ. 30 ದಿನಗಳ ಒಳಗೆ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. . ಅರ್ಹತಾ ಮಾನದಂಡಗಳು ಇಲ್ಲದಿದ್ದರೂ ಕಂಪನಿಯೊಂದನ್ನು ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟ್ ಮಾಡಲು ಅಕ್ರಮ ಎಸಗಲಾಗಿದೆ. ದೊಡ್ಡ ಮಟ್ಟದ ಹಣಕಾಸು ವಂಚನೆ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಇವೆಲ್ಲವೂ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು.
ಇನ್ನೂ ಇದೇ ಪ್ರಕರಣದಲ್ಲಿ ಬಿಎಸ್ಇ ವಿರುದ್ಧವೂ ದೂರು ದಾಖಲಾಗಿದೆ. ಬಿಎಸ್ಇ ಕೂಡ ಸೆಬಿ ವಾದವನ್ನು ಪುನರುಚ್ಚರಿಸಿದೆ. ಈಗ ಸೆಬಿ ಮತ್ತು ಬಿಎಸ್ಇ ಎರಡೂ ಕೂಡ ಕಾನೂನು ಮಾರ್ಗದಲ್ಲಿ ಪ್ರತಿಹೋರಾಟ ನಡೆಸಲು ನಿಶ್ಚಯಿಸಿವೆ.