ಬೆಂಗಳೂರು:- ಸಚಿವ ಶಿವಾನಂದ ಪಾಟೀಲ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಡಿ ಶಾಸಕ ಯತ್ನಾಳ್ಗೆ ಕೋರ್ಟ್ನಿಂದ ನೋಟಿಸ್ ಜಾರಿ ಮಾಡಲಾಗಿದೆ.
ಪ್ರವಾಸಿಗರ ಹುಚ್ಚಾಟ: ರಾಣಿಝರಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ ಐವರ ಬಂಧನ!
ದೂರು ಸಂಬಂಧ ಯತ್ನಾಳ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದ ನೋಟಿಸ್ ನೀಡಲಾಗಿದೆ. ಲೋಕಸಭಾ ಚುನಾವಣೆ ವೇಳೆ ಯತ್ನಾಳ್ ಮಾಡಿದ್ದ ಭ್ರಷ್ಟಾಚಾರದ ಸುಳ್ಳು ಆರೋಪದಿಂದ ವರ್ಚಸ್ಸಿಗೆ ಧಕ್ಕೆಯಾಗಿದೆ. ಹೀಗಾಗಿ ಮಾನನಷ್ಟ ಪ್ರಕರಣ ದಾಖಲಿಸುವಂತೆ ಖಾಸಗಿ ದೂರು ನೀಡಿದ್ದರು. ಹೀಗಾಗಿ ಇದೀಗ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.