ಬೆಂಗಳೂರು: ಈಗಾಗಲೇ ಮಳೆಯ ಕಾರಣದಿಂದಾಗಿ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮತ್ತೊಂದೆಡೆ ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ.
Bangalore: ಜಿಗಣಿಯಲ್ಲಿ ಪಾಕ್ ಪ್ರಜೆಗಳ ಬಂಧನ ಬೆನ್ನಲ್ಲೇ 14 ಪಾಕಿಸ್ತಾನೀಯರು ಅರೆಸ್ಟ್
ಮಲ್ಲಿಗೆ ಕೆಜಿಗೆ 1000 ರೂ. ಗುಲಾಬಿ ಕೆಜಿಗೆ 500 ರೂ. ಕನಕಾಂಬರ ಕೆಜಿಗೆ 2000ರೂ, ಸೇವಂತಿಗೆ ಕೆಜಿಗೆ 450 ರೂ. ಸುಗಂಧರಾಜ ಕೆಜಿಗೆ 300 ರೂ. ಅಣಗಲು ಹೂ ಕೆಜಿ 700. ಚೆಂಡೂ ಹೂ 150. ಕಾಕಾಡ 800. ದುಂಡು ಮಲ್ಲಿಗೆ 800ರಿಂದ200. ಕಮಲ ಜೋಡಿಗೆ 70ರೂ ಇದೆ.
ಇನ್ನೂ ಹಣ್ಣಿನ ಬೆಲೆ ಕೂಡ ಜಾಸ್ತಿಯಾಗಿದ್ದು ಸೇಬು ಕೆಜಿಗೆ 120 ರಿಂದ 150ರೂ. ದಾಳಿಂಬೆ ಕೆಜಿಗೆ 250 ರೂ. ಏಲಕ್ಕಿ ಬಾಳೆ ಹಣ್ಣು ಕೆಜಿಗೆ 120 ರೂ. ಸೀತಾಫಲ 180 ರಿಂದ 140 ರೂ. ಸಪೋಟ 200 ರೂ. ದ್ರಾಕ್ಷಿ 180ರಿಂದ200 ರೂ. ಅನಾನಸ್ ಎರಡಕ್ಕೆ 50-100 ರೂ. ಕಿತ್ತಳೆ 50 ರಿಂದ 90 ರೂ. ಮೂಸುಂಬೆ 70 ರೂ ಇದೆ.