ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ನಾಳೆ ವಾಷಿಂಗ್ಟನ್ ನ ಡಿಸಿಯ ಕ್ಯಾಪಿಟಲ್ನಲ್ಲಿ ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಅಮೆರಿಕದ 47 ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು, ಕ್ಯಾಪಿಟಲ್ ರೊಟುಂಡ ಕಟ್ಟಡದ ಒಳಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ತೀವ್ರ ಚಳಿಯ ಹಿನ್ನೆಲೆಯಲ್ಲಿ ಕಟ್ಟಡದ ಒಳಗೆ ಪ್ರಮಾಣವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
ಟ್ರಂಪ್ ಪದಗ್ರಹಣ ಕಾರ್ಯಕ್ರಮಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಭಾಗವಹಿಸುತ್ತಿದ್ದಾರೆ. ಜೊತೆಗೆ ಚೀನಾ ಉಪಾಧ್ಯಕ್ಷ ಹ್ಯಾನ್ ಜೆಂಗ್, ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ದಂಪತಿ ಸೇರಿದಂತೆ ಇನ್ನೂ ಹಲವು ಅಂತಾರಾಷ್ಟ್ರೀಯ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಬಲ ಪಂಥೀಯ ನಾಯಕರಾದ ನಿಗೆಲ್ ಫರಾಜ್ (ಯುಕೆ), ಎರಿಕ್ ಜೆಮೌರ್ (ಫ್ರಾನ್ಸ್ ) ಮತ್ತು ಬ್ರೆಜಿಲ್ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಭಾಗಿಯಾಗಿವ ಸಾಧ್ಯತೆಯಿದೆ.
ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ನ ಸಿಇಒ ಎಲಾನ್ ಮಸ್ಕ್, ಅಮೆಜಾನ್ ಕಾರ್ಯನಿರ್ವಾಹಕ ಅಧ್ಯಕ್ಷ ಜೆಫ್ ಬೆಜೋಸ್, ಗೂಗಲ್ ಸಿಇಒ ಸುಂದರ್ ಪಿಚೈ, ಆಪಲ್ ಸಿಇಒ ಟಿಮ್ ಕುಕ್, ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ ಮನ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್, ಟಿಕ್ ಟಾಕ್ ಸಿಇಒ ಶೌ ಜಿ ಚೆವ್ ಭಾಗಿಯಾಗಲಿದ್ದಾರೆ.
ಸದ್ಯ ವರ್ಜೀನಿಯಾದ ಸ್ಟರ್ಲಿಂಗ್ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್್ಫ ಕೋಸರ್ನಲ್ಲಿರುವ ತಮ ನಿವಾಸದಿಂದ ವಾಷಿಂಗ್ಟನ್ನತ್ತ ಪ್ರಯಾಣ ಬೆಳೆಸಿರುವ ಅವರಿಗೆ, ಬೆಂಬಲಿಗರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.