ದೇವನಹಳ್ಳಿ- ಒಂದೆಡೆ ಆಯೋದ್ಯೆಯಲ್ಲಿ ಪ್ರಭು ಶ್ರೀ ರಾಮನ ದಿವ್ಯ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮತ್ತೊಂದೆಡೆ ಸೀತಾ ರಾಮನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ.
ಹೌದು, ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲೂ ರಾಮನ ಮೂರ್ತಿಗಳ ಮಾರಾಟ ಬಲು ಜೋರಾಗಿಯೇ ನಡೆಯುತ್ತಿದೆ.
ಏರ್ಪೋರ್ಟ್ ನ ಟರ್ಮಿನಲ್ ಒಳಭಾಗದ ಅಂಗಡಿಗಳಲ್ಲಿ ರಾಮನ ಮೂರ್ತಿಗಳಿಗೆ ಭಾರಿ ಬೇಡಿಕೆ ಇದ್ದು, ಪ್ರಯಾಣ ಮಾಡುವ ವೇಳೆ ಸೀತಾ ರಾಮ ಹಾಗೂ ಹನುಮನ ಮೂರ್ತಿಗಳನ್ನು ಪ್ರಯಾಣಿಕರು ಖರೀದಿ ಮಾಡ್ತಿದ್ದಾರೆ. ವಿವಿಧ ಬಗೆಯ ಮೂರ್ತಿಗಳು ಪ್ರಯಾಣಿಕರ ಕಣ್ಮನ ಸೆಳೆಯುತ್ತಿವೆ. ಟರ್ಮಿನಲ್ ಒಳ ಭಾಗದ ಅಂಗಡಿಗಳಲ್ಲಿ ಮೂರ್ತಿಗಳ ಮಾರಾಟ ಮಾಡಲಾಗುತ್ತಿದ್ದು, ಎಲ್ಲರ ಗಮನ ಶ್ರೀ ರಾಮನ ಮೇಲೆ ನೆಟ್ಟಿದೆ.