ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶ ನಾಳೆ ಹೊರಬೀಳಲಿದೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣದ ಮತದಾರರು ನೀಡಿರುವ ಮತಗಳ ಎಣಿಕೆ ನಡೆಯಲಿದ್ದು,ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದು ಬಹಿರಂಗವಾಗಲಿದೆ.ಮೂರರಲ್ಲಿ ಎಲ್ಲರ ಚಿತ್ತ ನೆಟ್ಟಿರೋದು ಚನ್ನಪಟ್ಟಣದ ಕಡೆ..ಯಾಕಂದ್ರೆ ಗೌಡರ ಕುಟುಂಬ ಹಾಗೂ ಡಿಕೆ ಬ್ರದರ್ಸ್ ನಡುವಿನ ಕಾಳಗದಲ್ಲಿ ಯಾರ ಕೈಮೇಲಾಗುತ್ತದೆ ಅನ್ನೋ ಕುತೂಹಲವಿದೆ.
ಸಂಡೂರು,ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಳೆ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದೊಳಗೆ ಫಲಿತಾಂಶ ಹೊರಬೀಳಲಿದೆ.ಮತದಾರರು ಹಾಕಿರುವ ಮತಗಳು ಯಾರಿಗೆ ಅನ್ನೋದು ಗೊತ್ತಾಗುತ್ತದೆ.
ಮೂರು ಕ್ಷೇತ್ರಗಳಲ್ಲೂ ಸಾಕಷ್ಟು ಪೈಪೋಟಿ ಇದ್ದು ಇಂತವರೇ ಗೆಲ್ತಾರೆ ಅಂತ ಹೇಳೋದು ಕಷ್ಟ.ಸಮೀಕ್ಷೆಗಳು ವರದಿ ಪ್ರಕಟಿಸಿದ್ದು ಮೂರು ಕ್ಷೇತ್ರಗಳು ಒಂದೊಂದು ಪಕ್ಷ ಗೆಲ್ಲಲಿವೆ ಎಂದಿದ..ಆದರೆ ಫಲಿತಾಂಶವೇ ಉಲ್ಟಾ ಆದ್ರೂ ಅಚ್ಚರಿಯಿಲ್ಲ.ಹಾಗಾಗಿ ನಾಳಿನ ಫಲಿತಾಂಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಯಾರು ಸೋಲ್ತಾರೆ ಯಾರು ಗೆಲ್ತಾರೆ ಅನ್ನೋದು ನಾಳೆ ಹೊರಬೀಳಲಿದೆ.
BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರೋದಿಲ್ವಾ..!? ಕೊನೆಗೂ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಸ್ಪಷ್ಟನೆ
ಇನ್ನು ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರೋದು ಚನ್ನಪಟ್ಟಣ ಕ್ಷೇತ್ರ.ಅಭ್ಯರ್ಥಿಗಳ ವೈಯುಕ್ತಿಕ ರಾಜಕೀಯ ಭವಿಷ್ಯದ ಜೊತೆ ಗೌಡರ ಕುಟುಂಬ ಹಾಗೂ ಡಿಕೆ ಬ್ರದರ್ಸ್ ನಡುವಿನ ಪ್ರತಿಷ್ಠೆಯೂ ಇದರಲ್ಲಿದೆ.ಇಲ್ಲಿ ಯಾರು ಗೆಲ್ತಾರೆ ಅವರ ರಾಜಕೀಯ ಭವಿಷ್ಯದ ಜೊತೆ ಅವರ ಬೆನ್ನಿಗೆ ನಿಂತಿರುವ ಕುಟುಂಬದ ವೈಯುಕ್ತಿಕ ವರ್ಚಸ್ಸೂ ಹೆಚ್ಚಲಿದೆ.ಯಾರು ಸೋಲ್ತಾರೆ ಅವರ ರಾಜಕೀಯ ಭವಿಷ್ಯ ಮಸುಕಾಗಲಿದ್ರೆ,ಜೊತೆಗೆ ಅವರ ಬೆನ್ನಿಗೆ ನಿಂತಿರುವವರ ಪ್ರತಿಷ್ಠೆಯೂ ಮಣ್ಣು ಪಾಲಾಗಲಿದೆ. ಸಂಡೂರು,ಶಿಗ್ಗಾಂವಿ ಕ್ಷೇತ್ರಗಳಿಗಿಂತ ಹೆಚ್ಚು ಚನ್ನಪಟ್ಟಣ ಕ್ಷೇತ್ರದ ಕಡೆಯೇ ಎಲ್ಲರ ದೃಷ್ಟಿ ನೆಟ್ಟಿದೆ..
ಒಟ್ನಲ್ಲಿ,ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದ್ದು ಎಲ್ಲರ ಚಿತ್ತ ಅತ್ತ ನೆಟ್ಟಿದೆ..ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಮೂರು ಪಕ್ಷಗಳ ನಾಯಕರು ನಾವು ಇಲ್ಲಿ ಗೆಲ್ಲಬಹುದು,ಅಲ್ಲಿ ಸೋಲಬಹುದು,ಇಲ್ಲಿ ನಮಗೆ ಅನುಕೂಲವಿದೆ.ಅಲ್ಲಿಮತದಾರರು ಕೈಹಿಡಿದಿದ್ದಾರೆ.ಈರೀತಿ ನಾನಾ ಲೆಕ್ಕಾಚಾರಗಳ ಮೂಲಕ ಗೆಲುವಿನ ಬಗ್ಗೆ ಒಳಗೊಳಗೆ ಖುಷಿಪಡ್ತಿದ್ದಾರೆ.ಆದ್ರೆ ನಾಳೆ ಫಲಿತಾಂಶ ಹೊರಬೀಳುವವರೆಗೆ ಯಾವುದೂ ಖಚಿತವಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ.