ಬೆಂಗಳೂರು:- ಒಂದೆಡೆ ಹೊಸವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಸಿಸಿಬಿ ಪೊಲೀಸರು ನಗರದ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ.
ಬಾಣಂತಿಯರ ಸರಣಿ ಸಾವು ಕೇಸ್: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ!
ಈ ಮಧ್ಯೆಯೇ ಪೆಡ್ಲರ್ ಗಳು ಮಾದಕ ಮಾರಾಟಕ್ಕೆ ಹೊಸ ಹೊಸ ತಂತ್ರ ಉಪಷೋಗಿಸುತ್ತಿದ್ದಾರೆ. ವಿದೇಶಗಳಿಂದ ವಿವಿಧ ಬಗೆಯ ಡ್ರಗ್ಸ್ ಬೆಂಗಳೂರಿಗೆ ಕೊರಿಯರ್ಗಳ ಮೂಲಕ ಬರುತ್ತಿವೆ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿದ ಸಿಸಿಬಿ ಪೊಲೀಸರು ಕಳೆದ ಅಕ್ಟೋಬರ್ 20ರಂದು ಬೆಂಗಳೂರಿನ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅನುಮಾನಾಸ್ಪದ 3,500 ಕೊರಿಯರ್ಗಳನ್ನು ಪರಿಶೀಲಿಸಿದ ವೇಳೆ 606 ಕೊರಿಯರ್ಗಳಲ್ಲಿ ಬರೋಬ್ಬರಿ 21 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು.
ನ್ಯೂ ಇಯರ್ ಹತ್ತಿರವಾಗುತ್ತಿದ್ದಂತೆ ಮಾದಕ ವಸ್ತುಗಳ ಮೂಲಗಳ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಡ್ರಗ್ಸ್ ಪತ್ತೆಯಾದ 606 ಕೊರಿಯರ್ಗಳ ಬೆನ್ನತ್ತಿದ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕಂದರೆ ಅಷ್ಟೂ ಕೊರಿಯರ್ಗಳ ಅಡ್ರೆಸ್ಗಳು ನಕಲಿಯಾಗಿದ್ದವು. ಕಳೆದ ಎರಡು ತಿಂಗಳಲ್ಲಿ ಒಂದೇ ಒಂದು ಅಡ್ರೆಸ್ ಕೂಡ ಪೊಲೀಸರಿಗೆ ಪತ್ತೆಯಾಗಿಲ್ಲ.
ತಪ್ಪು ಅಡ್ರೆಸ್ ಇರುವ ಕೊರಿಯರ್ಗಳು ಅಡ್ರೆಸ್ಗೆ ಹೋಗಿ ವಾಪಸ್ ಬರುತ್ತವೆ. ನಂತರ ಕೊರಿಯರ್ ಆಫೀಸ್ಗಳಿಗೆ ಬಂದು ಬಳಕೆದಾರರು, ಅಥವಾ ಪೆಡ್ಲರ್ಗಳು ಡ್ರಗ್ಸ್ ಇರುವ ಕೋರಿಯರ್ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲ ಕಡೆಗಳಲ್ಲಿ ಅಲ್ಲಿನ ಸಿಬ್ಬಂದಿಗಳೇ ಈ ದಂಧೆಯಲ್ಲಿ ಭಾಗಿಯಾಗಿದ್ದು, ತಲುಪಿಸಬೇಕಾದ ಕಡೆಗೆ ತಲುಪಿಸುತ್ತಿದ್ದಾರೆ.