ಚಿಕ್ಕಮಗಳೂರು:- ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವ ಭೂಗತರಾಗಿದ್ದ 6 ಮಂದಿ ನಕ್ಸಲೀಯರು ನಾಳೆ ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗಲು ಮುಂದಾಗಿದ್ದಾರೆ.
ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಸಿಕ್ತು ಗುಡ್ ನ್ಯೂಸ್: ಶೀಘ್ರವೇ ಬ್ಯಾಂಕ್ ನಿಂದ ಹಣ ಜಮೆ!
ಶರಣಾಗತಿಗೂ ಮುನ್ನ ಮುಂಡುಗಾರು ಲತಾ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆ್ಯಕ್ಟಿವ್ ಆಗಿದ್ದ ನಕ್ಸಲರನ್ನ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಕಾಡಿನೊಳಗೆ ಭೇಟಿಯಾಗಿ ಸಭೆ ನಡೆಸಿದ್ದಾರೆ.
1. ಮುಂಡುಗಾರು ಲತಾ, 2. ವನಜಾಕ್ಷಿ, 3. ಸುಂದರಿ, 4. ಮಾರಪ್ಪ ಅರೋಳಿ, 5. ವಸಂತ ಟಿ., 6. ಎನ್. ಜೀಶಾ ಈ 6 ಮಂದಿ ನಕ್ಸಲರು ಈಗಾಗಲೇ ಶಾಂತಿಗಾಗಿ ನಾಗರಿಕ ವೇದಿಕೆಗೆ ಶರಣಾಗತಿ ಪತ್ರ ನೀಡಿದ್ದು, ನಾಳೆ ಸಂಜೆ ವೇಳೆಗೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ರಾಷ್ಟ್ರೀಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.
ಚಿಕ್ಕಮಗಳೂರಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಪ್ರತಿಕ್ರಿಯಿಸಿದ್ದು, ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿರುವ ಹಿನ್ನೆಲೆ ಶರಣಾಗುತ್ತಿದ್ದೇವೆ. ನಾವು ಸಮಾಜದ ಮುಖ್ಯವಾಹಿನಿಗೆ ಬರುತ್ತೇವೆ. ನಮ್ಮ ಬೇಡಿಕೆಯನ್ನ ಎರಡು ಸಮಿತಿ ಸರ್ಕಾರಕ್ಕೆ ತಲುಪಿಸಿದೆ. ನಾವು ಪ್ರಜಾತಾಂತ್ರಿಕ ಸಾಂವಿಧಾನಿಕ ಹೋರಾಟ ಮಾಡುತ್ತೇವೆ. ಕೊನೆ ವರೆಗೂ ಜನರ ಪರ ನಿಂತು ಹೋರಾಟ ಮಾಡುತ್ತೇವೆ. ಯಾವ ಕಾರಣಕ್ಕೂ ಜನಪರ ಹೋರಾಟದಿಂದ ಹಿಂದೆ ಸರಿಯಲ್ಲ. ನಮ್ಮ ಉಸಿರು ಇರುವವರೆಗೂ ನಾವು ಹೋರಾಟ ಮಾಡುತ್ತೇವೆ.ನಾವೆಲ್ಲರೂ ನಾಳೆ ನಿಮ್ಮ ಮುಂದೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.